

ವಿಜಯಪುರ: ಶರಣೆ ಕವಯತ್ರಿ ಅಕ್ಕಮಹಾದೇವಿ ತಮ್ಮ ವಚನಗಳ ಮೂಲಕ ಸಾಮಾಜಿಕ ಚಿಂತನೆ ಮೂಡಿಸುವ ಜತೆಗೆ ಸಮಾಜದ ಓರೆಕೋರೆ ತಿದ್ದಿದ ಅನುಭಾವಿ ಎಂದು ತಿಕೋಟಾ ಜಿಪಂ ಮಾಜಿ ಸದಸ್ಯೆ ಪ್ರತಿಭಾ ಪಾಟೀಲ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಮತ್ತು ಕಸಾಪ ನಗರ ಟಕಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕಮಹಾದೇವಿ ಕುರಿತ ಚಿಂತನಾ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಕಮಹಾದೇವಿ ಅವರು 12ನೇ ಶತಮಾನದ ಜ್ಞಾನದ ಜ್ಯೋತಿಯಾಗಿ ಹೊರಹೊಮ್ಮುವ ಮೂಲಕ ವಚನ ಸಾಹಿತ್ಯ ಶ್ರೀಮಂತಗೊಳಿಸಿದ ಹಲವು ವಚನಕಾರರಲ್ಲಿ ಅಗ್ರಗಣ್ಯ ಪಂಕ್ತಿಯಲ್ಲಿದ್ದಾರೆ ಎಂದರು.
ವಿಶ್ರಾಂತ ಮುಖ್ಯಾಧ್ಯಾಪಕಿ ಶಾರದಾ ಐಹೊಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಕಮಹಾದೇವಿ ಚಿಕ್ಕ ವಯಸ್ಸಿನಲ್ಲಿಯೇ ಸಕಲ ಸುಖಭೋಗಗಳನ್ನು ತ್ಯಜಿಸಿ, ಜೀವನದಲ್ಲಿ ಅನೇಕ ಪರೀೆಗಳನ್ನು ಎದುರಿಸಿ ಸಾಾತ್ ಶಿವನನ್ನೇ ತನ್ನ ಪತಿಯಾಗಿ ಸ್ವೀಕರಿಸುವಲ್ಲಿ ಯಶಸ್ವಿಯಾಗಿದ್ದಾಳೆ ಎಂದರು.
ಶರಣ ಚಿಂತಕಿ ಇಂದಿರಾ ಬಿದರಿ ಮಾತನಾಡಿ, ಅಕ್ಕನ ವಚನಗಳಲ್ಲಿ ಬದುಕಿನ ಮಾರ್ಗಗಳು ಅಡಕವಾಗಿವೆ. ಎಲ್ಲ ಕಾಲಕ್ಕೂ ಪ್ರಸ್ತುತವಾದ ಹಲವು ಮೌಲ್ಯಗಳಿದ್ದು, ಅವುಗಳ ಮೂಲಕ ಸಾಮಾಜಿಕ ಚಿಂತನೆಗಳನ್ನು ಹಲವು ದೃಷ್ಟಾಂತಗಳ ಮೂಲಕ ತಿಳಿಸಿಕೊಟ್ಟರು ಎಂದು ಹೇಳಿದರು.
ಸಾಹಿತಿ ಶಿವಲೀಲಾ ಕೋರಿ ಮಾತನಾಡಿ, ಹೆಣ್ಣಿಗೂ ಸಹ ವ್ಯಕ್ತಿತ್ವವಿದೆ ಎಂಬುದನ್ನು ತನ್ನ ವಚನಗಳ ಮೂಲಕ ಅವತ್ತಿನ ಕಾಲದಲ್ಲಿ ದಿಟ್ಟತನದಿಂದ ನಿರೂಪಿಸಿ ತೋರಿಸಿದ ಆಧ್ಯಾತ್ಮಿಕ ಹುಡುಕಾಟದ ದಿವ್ಯ ರತ್ನ ಎಂದರು.
ವಿಡಿಎ ಮಾಜಿ ಅಧ್ಯಕ್ಷ ವಿಜಯಕುಮಾರ ಘಾಟಗೆ, ಮಹೇಶ ಪಾಟೀಲ, ಆನಂದ ಕುಲಕರ್ಣಿ, ಮಲ್ಲಪ್ಪ ಭಾವಿಕಟ್ಟಿ, ಡಾ. ವಿ.ಡಿ. ಐಹೊಳ್ಳಿ ಇದ್ದರು. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಾಲ ಮಂದಾರ ಎಂಬ ಮಕ್ಕಳ ಕವನ ಸಂಕಲನಕ್ಕೆ ಆಯ್ಕೆಯಾದ ಕವಯತ್ರಿ ಪರವೀನ ಶೇಖ ಅವರನ್ನು ಸನ್ಮಾನಿಸಲಾಯಿತು. ಮೆಹತಾಬ ಕಾಗವಾಡ ವಚನ ಗಾಯನ ಮಾಡಿದರು. ಮಹಮ್ಮದಗೌಸ್ ಹವಾಲ್ದಾರ್ ಸ್ವಾಗತಿಸಿದರು. ಮಮತಾ ಮುಳಸಾವಳಗಿ ನಿರೂಪಿಸಿದರು. ಡಾ. ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಿದ್ರಾಮಯ್ಯ ಲಕ್ಕುಂಡಿಮಠ ವಂದಿಸಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಭಾಗೀರಥಿ ಸಿಂದೆ, ಜಿ.ಎಸ್. ಬಳ್ಳೂರ, ದ್ಯಾಮಗೊಂಡ ಹಡಗಲಿ, ಎನ್.ಎಂ. ದಖನಿ, ವೀರಣ್ಣ ಸಜ್ಜನ, ಶಾಂತಾ ವಿಭೂತಿ, ಶಿವಾಜಿ ಮೋರೆ, ಆರ್.ಎಂ. ದೊಡಮನಿ, ಲತಾ ಗುಂಡಿ, ಗಂಗಮ್ಮ ರಡ್ಡಿ, ಲಕ್ಷಿ$್ಮ ಬಿರಾದಾರ, ಅನಂತರಾವ ಕುಲಕರ್ಣಿ, ಸುನೀಲ ಬಜಂತ್ರಿ, ಲಕ್ಷಿ$್ಮ ಕಾತ್ರಾಳ, ರವಿ ಬೆನಕಟ್ಟಿ ಮತ್ತಿತರರಿದ್ದರು.