

ಹುಬ್ಬಳ್ಳಿ: ಇಲ್ಲಿಯ ಜೆ.ಸಿ. ನಗರದಲ್ಲಿರುವ ಅಕ್ಕನ ಬಳಗದಲ್ಲಿ ಬಳಗದ 86ನೇ ವಾಷಿರ್ಕೋತ್ಸವ ಹಾಗೂ ಮಹಾಶಿವಶರಣೆ ಅಕ್ಕಮಹಾದೇವಿಯ ಜಯಂತಿ ಉತ್ಸವ ಏರ್ಪಡಿಸಲಾಗಿತ್ತು.
ನಗರದ ಶ್ರೀ ಗುರುಸಿದ್ದೇಶ್ವರ ಕರ್ತೃ ಗದ್ದುಗೆಗೆ ಬಳಗದ ತಾಯಂದಿರು ಅಭಿಷೇಕ, ಅಕ್ಕಮಹಾದೇವಿಗೆ ಪೂಜೆ ನೆರವೇರಿಸಿದರು. ಶರಣೆಯರಿಂದ ರುದ್ರ ಪಠಣ, ತೊಟ್ಟಿಲೋತ್ಸವ ನೆರವೇರಿದ ಬಳಿಕ ಜೋಗುಳಪದ ಹಾಡಿದರು. ಶರಣೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಕ್ಕನ ಬಳಗದ ಅಧ್ಯೆ ಗೀತಾ ಮುಳ್ಳಳ್ಳಿ, ವಿಮಲಾ ಯಳಮಲಿ, ನಾಗರತ್ನಾ ಬೆಣ್ಣೂರಮಠ, ರೂಪಾ ಹತಿರ್, ಪ್ರಮೀಳಾ ಹಟ್ಟಿಹೊಳಿ, ಕೆ.ಕೆ. ಸುಮಂಗಲಾ, ನಾಗರತ್ನಾ ಅಮಿನಗಡ, ಸುಲೋಚನಾ ಬೂಸನೂರ, ಜಯಶ್ರೀ ಯಳಮಲಿ, ಶಶಿಕಲಾ ಶೀರಿ, ಶಾಂತಾ ಹೊಸಪೇಟಿ, ಉಮಾ ಪಂಚಾಂಗಮಠ, ಲಲಿತಾ ಯಳಮಲಿ, ಜಯಶ್ರೀ ವಾಲಿ, ಮಾಲಾ ಹಿರೇಮಠ, ಅನ್ನರ್ಪೂಣಮ್ಮ, ಸುಶಿಲಾ ಹಿರೇಮಠ, ಶೈಲಾ ಕರವೀರಶೆಟ್ರ, ಇತರರು ಪಾಲ್ಗೊಂಡಿದ್ದರು.