

ರಾಯಚೂರು ಬಸವಕೇಂದ್ರ ಜಿಲ್ಲಾ ಘಟಕದಿಂದ ಏ.೧೩ ರಂದು ಸಂಜೆ ೦೪ ಗಂಟೆಗೆ ನಗರದ ಬಸವ ಕೇಂದ್ರದಲ್ಲಿ ವೀರ ವಿರಾಗಿಣಿ ಅಕ್ಕಮಹಾದೇವಿ ಜಯಂತ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆಂದು ಕೇಂದ್ರದ ಗೌರವಾಧ್ಯಕ್ಷ ನಾಗನಗೌಡ ಹರವಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಸಾನಿಧ್ಯವನ್ನು ಸಿರಗುಪ್ಪ ಬಸವ ಬಳಗದ ಬಸವರಾಜಪ್ಪ ವೆಂಕಟಾಪುರು ವಹಿಸಲಿದಾರೆ. ಬಸವ ಕೇಂದ್ರ ಅಧ್ಯಕ್ಷ ರಾಚನಗೌಡ ಕೋಳೂರು ಅಧ್ಯಕ್ಷತೆಯಲ್ಲಿ ವಹಿಸಲಿದ್ದು, ನಾಗನಗೌಡ ಹರವಿ ಉದ್ಘಾಟಿಸಲಿದ್ದಾರೆ. ಹೆದರದಿರು ಮನವೆ ವಿಷಯವಾಗಿ ಬಸವ ಮಾಗ್ ಪ್ರತಿಷ್ಠಾನದ ಅಧ್ಯಕ್ಷ ವಿಶ್ವರಾಧ್ಯ ಸತ್ಯಂಪೇಟೆ ಉಪನ್ಯಾಸ ನೀಡಲಿದ್ದಾರೆ.
ಮಸ್ಕಿಯ ಅಭಿನಂದನಾ ಶಿಕ್ಷಣ ಸಂಸ್ಥೆಯ ರಾಮಣ್ಣ ಹಂಪರಗುAದಿ ಮತ್ತು ಶೃತಿ ಹಂಪರಗುAದಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ. ರಾಘವೇಂದ್ರ ಆಶಾಪುರ ಇವರಿಂದ ವಚನ ಗಾಯನ, ತೊಟ್ಟಿಲು ಕಾರ್ಯಕ್ರಮ ನಡೆಯಲಿದೆ. ಜಗದೇವಿ ಚನ್ನಬಸವ ಉಪಸ್ಥಿತಿಯಲ್ಲಲಿ ಕಾಐðಕ್ರಮ ನಡೆಯಲಿದೆ. ಅಕ್ಕಮಹಾದೇವಿ ಭಾವಚಿತ್ರವನ್ನು ನಿಜಲಿಂಗಪ್ಪ ಕಾಲೋನಿಯ ಶ್ರೀ ಗಣೇಶ ಗುಡಿಯಿಂದ ಬಸವ ಕೇಂದ್ರವರೆಗೆ ಮೆರವಣಿಗೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು, ಮಹಾಜನಶೆಟ್ಟಿ, ನಾಗೇಶ, ಅನ್ನಪೂರ್ಣಮ್ಮ ಹರವಿ, ಚನ್ನಬಸವಣ್ಣ, ಜಗದೇವಿ ಚಿನ್ನಬಸವಣ್ಣ ಇದ್ದರು.