ವಚನ ಸಾಹಿತ್ಯಕ್ಕೆ ಅಕ್ಕಮಹಾದೇವಿ ಕೊಡುಗೆ ಅನನ್ಯ

Oplus_16908288
Oplus_16908288
Published on

ನಂಜನಗೂಡು : ವಚನಗಳ ಮೂಲಕ ಜೀವನ ಸಾರ್ಥಕತೆಗೆ ಉತ್ತಮ ಸಂದೇಶ ನೀಡಿದ ಮಹಿಳೆಯರಲ್ಲಿ ಅಕ್ಕಮಹಾದೇವಿ ಪ್ರಮುಖರು ಎಂದು ಶಾಸಕ ದರ್ಶನ್ ಧ್ರುವ ನಾರಾಯಣ ಹೇಳಿದರು. ವಿದ್ಯಾನಗರ- ಅಕ್ಕಮಹಾದೇವಿ ನಗರ ಬಡಾವಣೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ 3ನೇ ವರ್ಷದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಮಾತನಾಡಿ, 12ನೇ ಶತಮಾನದಲ್ಲಿ ವಚನಗಳ ಮೂಲಕ ಮಹಿಳಾ ಸಮಾನತೆಯನ್ನೂ ಸಾರಲಾಯಿತು. ಅಕ್ಕನ ವಚನಗಳು ಅಂದು ಮಾತ್ರವಲ್ಲ, ಇಂದಿನ ಮಹಿಳೆಯರಿಗೂ ಮಾದರಿಯಾಗಿವೆ. ಇವರ ವಚನಗಳಿಂದ ಜೀವನ ಉತ್ಸಾಹ ಇಮ್ಮಡಿಸಲಿದೆ ಎಂದರು. ಮುಖ್ಯ ಭಾಷಣಕಾರ ದೇವನೂರು ಪ್ರಶಾಂತ್ ಮಾತನಾಡಿ, ಸಮಸ್ತ ಜಗತ್ತಿನ ಇತಿಹಾಸ ನೋಡಿದಾಗ ಬಹುತೇಕ ಕ್ರಾಂತಿಗಳು 12ನೇ ಶತಮಾನದಲ್ಲೇ ನಡೆದಿವೆ. 770 ಶರಣರಲ್ಲಿ 33 ಮಹಿಳಾ ವಚನಗಾರ್ತಿಯರು ಇದ್ದರು. ಅದರಲ್ಲಿ ಪ್ರಮುಖರು ಅಕ್ಕಮಹಾದೇವಿ ಎಂದರು.

ಹೆಣ್ಣು ಮಕ್ಕಳನ್ನು ತಾತ್ಸಾರದಿಂದ ಕಾಣುತ್ತಿದ್ದ ಕಾಲದಲ್ಲೇ ಬಸವಣ್ಣ ಅನುಭವ ಮಂಟಪವನ್ನು ನಿರ್ಮಿಸಿದರು. ಮಹಿಳಾ ಕುಲಕ್ಕೆ ವಚನಗಳ ಮೂಲಕ ಅಕ್ಕ ಚೈತನ್ಯ ತುಂಬಿದರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net