

ಮಡಿಕೇರಿ:
ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೂಪಿಸಿದ ಯೋಜನೆಗಳಲ್ಲಿ ಒಂದಾದ 'ಅಕ್ಕ ಕೆಫೆ' ಕೊಡಗಿಗೂ ಮಂಜೂರಾಗಿದೆ. ಜಿಲ್ಲೆಯ ಮೊದಲ 'ಅಕ್ಕ ಕೆಫೆ' ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಬಸವನಹಳ್ಳಿಯಲ್ಲಿ ಸದ್ಯದಲ್ಲೇ ಆರಂಭ ಆಗಲಿದೆ. ಈಗಾಗಲೇ 'ಮತ್ಸö್ಯ ಸಂಜೀವಿನಿ ರೆಸ್ಟೋರೆಂಟ್' ಇಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು, 'ಅಕ್ಕ ಕೆಫೆ' ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ 'ಮತ್ಸö್ಯ ಸಂಜೀವಿನಿ ರೆಸ್ಟೋರೆಂಟ್' ಆರಂಭಿಸಲಾಗಿತ್ತು. ಸೋಮವಾರಪೇಟೆ ತಾಲೂಕಿನ ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಲ್ಲಳ್ಳಿ ಜಲಪಾತ, ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ಚಿಕ್ಲಿಹೊಳೆ ಹಾಗೂ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಬಸವನಹಳ್ಳಿಯಲ್ಲಿ ಸ್ತಿçÃಶಕ್ತಿ ಒಕ್ಕೂಟಗಳ ಮೂಲಕ 'ಮತ್ಸö್ಯ ಸಂಜೀವಿನಿ ರೆಸ್ಟೋರೆಂಟ್'ಗೆ ಚಾಲನೆ ನೀಡಲಾಗಿತ್ತು.
ಸ್ವ-ಸಹಾಯ ಸಂಘದ ಸದಸ್ಯೆಯರಿಂದಲೇ ಸಂಪೂರ್ಣವಾಗಿ ನಿರ್ವಹಣೆ ಆಗುವ ಈ 'ಮತ್ಸö್ಯ ಸಂಜೀವಿನಿ ರೆಸ್ಟೋರೆಂಟ್'ಗಳ ಆರಂಭದ ಹಿಂದೆ ಕೇವಲ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಗುರಿ ಮಾತ್ರ ಇರಲಿಲ್ಲ. ಅವರನ್ನು ಎಲ್ಲಾ ರೀತಿಯಿಂದ ಸಮಾಜದಲ್ಲಿ ಮುಂದಕ್ಕೆ ತರುವ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಮೂಲಕ ಅನುಷ್ಠಾನಗೊಳಿಸಲಾಗಿದೆ.
ಗ್ರಾಮೀಣ ಬಡ ಮಹಿಳೆಯರ ಜೀವನ ಮಟ್ಟ ಹೆಚ್ಚಿಸುವುದರ ಜತೆಯಲ್ಲಿ ಸ್ವಸಹಾಯ ಗುಂಪುಗಳ ಬಲವರ್ಧನೆ ಮೂಲಕ ಬಡತನ ಮಟ್ಟವನ್ನು ಕಡಿಮೆ ಮಾಡುವ ರೀತಿಯಲ್ಲಿ ಯೋಜನೆಯನ್ನು ವಿನ್ಯಾಸ ಮಾಡಲಾಗಿದೆ. ಸ್ತಿçÃಶಕ್ತಿ ಸಂಘಗಳ ಒಕ್ಕೂಟಗಳಿಗೆ 'ಮತ್ಸö್ಯ ಸಂಜೀವಿನಿ ರೆಸ್ಟೋರೆಂಟ್' ಜವಾಬ್ದಾರಿ ಕೊಡಲಾಗಿದ್ದು, ಅವರಿಗೆ ಸರ್ಕಾರದ ಮೂಲಕವೇ ಹಣಕಾಸಿನ ನೆರವು, ಕೌಶಲ್ಯ ತರಬೇತಿ ಹಾಗೂ ಜೀವನೋಪಾಯ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಜಿಲ್ಲೆಯ ಮೂರು 'ಮತ್ಸö್ಯ ಸಂಜೀವಿನಿ ರೆಸ್ಟೋರೆಂಟ್'ಗಳ ಪೈಕಿ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಬಸವನಹಳ್ಳಿಯಲ್ಲಿರುವ ರೆಸ್ಟೋರೆಂಟ್ ಸಾಕಷ್ಟು ಯಶಸ್ವಿ ಆಗಿದೆ. ಸಂಜೀವಿ ಸ್ತಿçÃಶಕ್ತಿ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಈ ರೆಸ್ಟೋರೆಂಟ್ ಅನ್ನು ಸ್ತಿçÃಶಕ್ತಿ ಸಂಘದ ಸದಸ್ಯೆಯರಾದ ಅನುಪಮಾ ಮತ್ತು ಅಜಿತಾ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿದಿನವೂ ಶುಚಿ ಮತ್ತು ರುಚಿಯಾಗಿ ಮೀನಿನ ಭಕ್ಷö್ಯಗಳ ಜತೆಗೆ ಊಟ ಕೊಡುವ ಮೂಲಕ ಈ ರೆಸ್ಟೋರೆಂಟ್ ಗ್ರಾಹಕರ ಮನ ಗೆದ್ದಿದೆ.
ಯಶಸ್ವಿಯಾಗಿ ನಡೆಯುತ್ತಿರುವ ಬಸವನಹಳ್ಳಿ 'ಮತ್ಸö್ಯ ಸಂಜೀವಿನಿ ರೆಸ್ಟೋರೆಂಟ್'ಗೆ ಗುಡ್ಡೆಹೊಸೂರು ಗ್ರಾ.ಪಂ. ಮೂಲಕ ಜಾಗದ ವ್ಯವಸ್ಥೆ ಮಾಡಿಕೊಡಲಾಗಿದೆ. ಬ್ರಾಂಡಿAಗ್ ನೆರವು ಕೂಡ ಪಂಚಾಯಿತಿ ವತಿಯಿಂದ ಒದಗಿಸಲಾಗಿದೆ. ರಾಷ್ಟಿçÃಯ ಹೆದ್ದಾರಿ 275ರಲ್ಲಿ ಮಡಿಕೇರಿ ಮತ್ತು ಕುಶಾಲನಗರ ಮಧ್ಯೆ ಆಯಕಟ್ಟಿನ ಜಾಗದಲ್ಲಿ ಇರುವುದರಿಂದ ಈ ರೆಸ್ಟೋರೆಂಟ್ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗಿದೆ. ಸರ್ಕಾರದ ಆಶಯಕ್ಕೆ ಪೂರಕವಾಗಿ ಸ್ತಿçà ಶಕ್ತಿ ಸಂಘದ ಸದಸ್ಯೆಯರು ಕೂಡ ಆಸಕ್ತಿ ಮತ್ತು ಶ್ರಮ ಹಾಕಿ ದುಡಿಯುವುದರಿಂದ ಈ ಯಶಸ್ಸು ಸಾಧ್ಯವಾಗಿದೆ ಎನ್ನುತ್ತಾರೆ ಪಂಚಾಯಿತಿ ಅಧಿಕಾರಿಗಳು.
'ಮತ್ಸö್ಯ ಸಂಜೀವಿನಿ ರೆಸ್ಟೋರೆಂಟ್' ಯಶಸ್ವಿಯಾಗಿ ಕಾರ್ಯಾಚರಿಸಲು ಪೂರಕ ವಾತಾವರಣ ಕಲ್ಪಿಸಿಕೊಟ್ಟ ಗುಡ್ಡೆಹೊಸೂರು ಗ್ರಾ.ಪಂ.ಗೆ ಈಗ ಜಿಲ್ಲೆಯ ಮೊದಲ 'ಅಕ್ಕ ಕೆಫೆ' ಕೂಡ ಮಂಜೂರಾಗಿದ್ದು, ಇದನ್ನೂ ಯಶಸ್ವಿಯಾಗಿ ಅಗತ್ಯವಿರುವ ಸಿದ್ಧತೆಗಳನ್ನು ಪಂಚಾಯಿತಿ ವತಿಯಿಂದ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ 'ಮತ್ಸö್ಯ ಸಂಜೀವಿನಿ ರೆಸ್ಟೋರೆಂಟ್' ಪಕ್ಕದಲ್ಲೇ ಜಾಗ ಗುರುತಿಸಲಾಗಿದ್ದು, ನಿರ್ವಹಣೆಗಾಗಿ ಸ್ತಿçà ಶಕ್ತಿ ಸಂಘದ ಆಯ್ಕೆಯನ್ನೂ ಮಾಡಿಕೊಳ್ಳಲಾಗಿದೆ.
ಮಹಿಳೆಯರ ಜೀವನೋಪಾಯ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ 2024-25ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ 'ಅಕ್ಕ ಕೆಫೆ' ಕಾರ್ಯಕ್ರಮದ ಘೋಷಣೆ ಮಾಡಿತ್ತು. ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ ರುಚಿಯಾಗಿ ಕೈಗೆಟಕುವ ದರದಲ್ಲಿ ಒದಗಿಸಲು ಮಹಿಳೆಯರೇ ನಡೆಸುವ 50 ಅಕ್ಕ ಕೆಫೆಗಳಿಗೆ ಕೇಂದ್ರ ಸರ್ಕಾರದ ಎನ್‌ಆರ್‌ಎಲ್‌ಎಂ ಯೋಜನೆಯಡಿಯಲ್ಲಿ ಆರಂಭಿಸಲು ಅನುಮೋದನೆ ಕೊಟ್ಟು ಆದೇಶ ನೀಡಲಾಗಿತ್ತು.
'ಅಕ್ಕ ಕಫೆ' ಕಾರ್ಯಕ್ರಮ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು. ಕಾರ್ಯಕ್ರಮದ ಮುಖ್ಯ ಉದ್ದೇಶ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಆಹಾರ ಪೂರೈಕೆ ಕ್ಷೇತ್ರದಲ್ಲಿ ಸುಸ್ಥಿರ ಜೀವನೋಪಾಯ ಚಟುವಟಿಕೆಯನ್ನು ಒದಗಿಸುವುದಾಗಿದೆ. ಪ್ರಮುಖವಾಗಿ ಈ ಅಕ್ಕ ಕಫೆ ಚಟುವಟಿಕೆಯಡಿ ಉತ್ತಮ ಗುಣಮಟ್ಟದ ಶುಚಿ-ರುಚಿ ಪೌಷ್ಠಿಕ ಆಹಾರವನ್ನು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಪೂರೈಸುವ ದೂರದೃಷ್ಟಿಯೊಂದಿಗೆ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿದೆ.
ಈ ಚಟುವಟಿಕೆಯಡಿ ಉನ್ನತ ಮಟ್ಟದ ಸಾಮರ್ಥ್ಯಾಭಿವೃದ್ಧಿ ತರಬೇತಿ ಮತ್ತು ಪ್ರಾತ್ಯಕ್ಷಿಗಳನ್ನು ಕೊಟ್ಟು ರಾಜ್ಯಾದ್ಯಂತ ಒಂದೇ ಮಾದರಿಯ ಕೆಫೆಗಳನ್ನು ಸ್ಥಾಪಿಸಲಾಗುತ್ತಿದೆ. ಇದರ ಒಂದು ಭಾಗವಾಗಿ ಕೊಡಗಿನಲ್ಲೂ ಪ್ರಥಮ 'ಅಕ್ಕ ಕೆಫೆ' ಕಾರ್ಯಾರಂಭ ಮಾಡಲಿದ್ದು, ಇದಕ್ಕಾಗಿ 20 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಕಟ್ಟಡ, ಪೀಠೋಪಕರಣ, ಉಪಕರಣ, ವಿನ್ಯಾಸ, ತರಬೇತಿ ಎಲ್ಲವನ್ನೂ ಒದಗಿಸಿಕೊಡಲಾಗುತ್ತದೆ. ಈ ಕೆಫೆಗಳು ಕೆಫೆ ಕಾಫಿ ಡೇ ಮಾದರಿಯಲ್ಲೇ ಕಾರ್ಯ ನಿರ್ವಹಿಸಲಿದ್ದು, ಕಾಫಿ, ಟೀ, ಬಿಸ್ಕೆಟ್‌ಗಳು ಇಲ್ಲಿ ಸಿಗಲಿದೆ. 'ಮತ್ಸö್ಯ ಸಂಜೀವಿನಿ ರೆಸ್ಟೋರೆಂಟ್' ರೀತಿಯಲ್ಲಿ 'ಅಕ್ಕ ಕೆಫೆ'ಯೂ ಇಲ್ಲಿ ಯಶಸ್ವಿ ಆಗುವ ನಿರೀಕ್ಷೆ ಸ್ಥಳೀಯರದ್ದು.
ಮತ್ಸö್ಯ ಸಂಜೀವಿನಿ ರೆಸ್ಟೋರೆಂಟ್ ನಮ್ಮ ಜೀವನದಲ್ಲಿ ಒಂದು ಹೊಸ ಹುರುಪನ್ನು ತಂದಿದೆ. ಆರ್ಥಿಕ ಸ್ವಾತಂತ್ರ‍್ಯ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವ ಹಂಬಲವಿದೆ. ಹೋಟೆಲ್ ಉದ್ಯಮದ ಯಾವುದೇ ಜ್ಞಾನವಿಲ್ಲದೆ ಸಣ್ಣ ಅಳುಕಿನಲ್ಲಿಯೇ ಆರಂಭಿಸಿದ್ದರು ಸಹ ಇದೀಗ ಆತ್ಮವಿಶ್ವಾಸ ಬಂದಿದೆ. ಗುಡ್ಡೆಹೊಸೂರು ಗ್ರಾ.ಪಂ. ಅಧಿಕಾರಿ ವರ್ಗ ಮತ್ತು ಆಡಳಿತ ಮಂಡಳಿ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ.
ಅನುಪಮಾ, ಮತ್ಸö್ಯ ಸಂಜೀವಿನಿ ರೆಸ್ಟೋರೆಂಟ್ ನಿರ್ವಾಹಕಿ
ನಮ್ಮ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಬಸವನಹಳ್ಳಿಯಲ್ಲಿ ಮತ್ಸö್ಯ ಸಂಜೀವಿನಿ ರೆಸ್ಟೋರೆಂಟ್ ಯಶಸ್ವಿಯಾಗಿ ನಡೆಯುತ್ತಿದೆ. ಈ ಮೂಲಕ ಸ್ತಿçà ಶಕ್ತಿ ಗುಂಪಿನ ಸದಸ್ಯೆಯರಿಗೆ ಆರ್ಥಿಕ ಬಲ ತುಂಬುವ ಕೆಲಸ ಮಾಡಲಾಗಿದೆ. ಅವರಲ್ಲಿ ವ್ಯಾವಹಾರಿಕ ಜ್ಞಾನವೂ ದೊಡ್ಡ ಪ್ರಮಾಣದಲ್ಲಿ ವೃದ್ಧಿಯಾಗಿದೆ. ಇದೀಗ ಜಿಲ್ಲೆಯ ಮೊದಲ 'ಅಕ್ಕ ಕೆಫೆ' ಕೂಡ ಗುಡ್ಡೆಹೊಸೂರು ಗ್ರಾ.ಪಂ.ಗೆ ಮಂಜೂರಾಗಿದ್ದು, ಬಸವನಹಳ್ಳಿಯಲ್ಲಿ ಇದಕ್ಕಾಗಿ ಜಾಗ ಗುರುತಿಸಲಾಗಿದೆ. ನಿರ್ವಣೆಗಾಗಿ ಸ್ತಿçÃಶಕ್ತಿ ಗುಂಪಿನ ಆಯ್ಕೆಯೂ ಆಗಿದೆ. ಸದ್ಯದಲ್ಲೇ ಇಲ್ಲಿ 'ಅಕ್ಕ ಕೆಫೆ' ಕಾರ್ಯಾರಂಭ ಮಾಡಲಿದೆ.
ಎಂ.ಆರ್. ಸುಮೇಶ್, ಪಿಡಿಒ, ಗುಡ್ಡೆಹೊಸೂರು ಗ್ರಾ.ಪಂ