ಅಖಿಲ ಭಾರತ ಅನುಭವ ಮಂಟಪ ಕಾರ್ಯಕ್ರಮ ಸೆ. 23ರಿಂದ

28 Dwd 1 (S.R.Hiremath)
Published on

ಧಾರವಾಡ: ಸಿಟಿಜನ್ಸ್ ಫಾರ್ ಡೆಮಾಕ್ರಸಿಯ (ಸಿಎಫ್‌ಡಿ) ಸುವರ್ಣ ಮಹೋತ್ಸವ ವರ್ಷದ ಅಂಗವಾಗಿ ಅಖಿಲ ಭಾರತ ಅನುಭವ ಮಂಟಪ- 2023 ಕಾರ್ಯಕ್ರಮವನ್ನು ಸೆ. 23 ಮತ್ತು 24ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 23ರಂದು ಬೆಳಗ್ಗೆ 11ಕ್ಕೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಕಾರ್ಯಕ್ರಮ ಉದ್ಘಾಟಿಸುವರು. ಶಿವಮೊಗ್ಗದ ಚಿಂತಕ ರಾಜೇಂದ್ರ ಚೆನ್ನಿ ದಿಕ್ಸೂಚಿ ಭಾಷಣ ಮಾಡುವರು. ಜೆಎನ್‌ಯು ಪ್ರಾಧ್ಯಾಪಕ ಪ್ರೊ. ಆನಂದಕುಮಾರ, ಉತ್ತರಪ್ರದೇಶ ಲಖನೌದ ಐಪಿಎಸ್ ಅಧಿಕಾರಿ ಎಸ್.ಆರ್. ಧಾರಾಪುರಿ, ಪುಣೆಯ ದತ್ತ ದೇಸಾಯಿ, ಡಾ. ಅಶೋಕ ಢವಳೆ, ಎನ್.ಡಿ. ಪಾಂಚೋಲಿ, ಪ್ರಶಾಂತ ಭೂಷಣ್, ಅರವಿಂದ ಮೂರ್ತಿ, ದೀಪಕ ಡೋಲಕಿಯಾ, ಇತರರು ಪಾಲ್ಗೊಳ್ಳುವರು. 25ರಂದು ಬೆಳಗ್ಗೆ 9ರಿಂದ 2 ಗಂಟೆಯವರೆಗೆ ಮುಂದಿನ ಕಾರ್ಯಕ್ರಮಗಳ ರೂಪುರೇಷಯ ಬಗ್ಗೆ ಚಿಂತನಾ ಕಾರ್ಯಕ್ರಮ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net