ಶಿಗ್ಲಿ ಗ್ರಾಪಂ 1ನೇ ವಾರ್ಡ್ ಸದಸ್ಯರಾಗಿ ಅಖಂಡಪ್ಪ ಆಯ್ಕೆ

SHIGLI
Published on

ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯಿತಿಯ ಒಂದನೇ ವಾರ್ಡ್ ಸದಸ್ಯರಾಗಿ ಅಖಂಡಪ್ಪ ಬಸವಂತಪ್ಪ ಕರ್ಜೆಕಣ್ಣವರ ಆಯ್ಕೆಯಾಗಿದ್ದಾರೆ.

ವಾರ್ಡ್ ಸದಸ್ಯ ನಿಧನರಾಗಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಜರುಗಿತ್ತು. ಬುಧವಾರ ಲಕ್ಷ್ಮೇಶ್ವರದ ತಹಸೀಲ್ದಾರ್ ಕಚೇರಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.

ಅಖಂಡಪ್ಪ ಅವರು ಪ್ರತಿಸ್ಪರ್ಧಿ ಶಾಂತವ್ವ ತಿಪ್ಪಣ್ಣ ಸ್ವಾದಿ ಅವರ ವಿರುದ್ಧ 209 ಮತಗಳ ಅಂತರಿಂದ ಗೆಲುವು ಸಾಧಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗೋಪಾಲ ನಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ತಹಸೀಲ್ದಾರ್ ವಾಸುದೇವ ಸ್ವಾಮಿ ಆಯ್ಕೆ ಪ್ರಮಾಣ ಪತ್ರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net