ಅಧ್ಯಾತ್ಮದಿಂದ ವ್ಯಕ್ತಿತ್ವ ವಿಕಾಸ

Oplus_131072
ಬಸವಕಲ್ಯಾಣ ತಾಲೂಕಿನ ಜೋಗೆವಾಡಿಯಲ್ಲಿ ಶ್ರೀ ಮಹದೇವ ಜಾತ್ರೋತ್ಸವ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಅಖಂಡ ಹರಿನಾಮ ಸಪ್ತಾಹ ಹಾಗೂ ಗೋಪಾಲ ಕಲಾ ಕಾರ್ಯಕ್ರಮಕ್ಕೆ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಚಾಲನೆ ನೀಡಿದರು.
Published on

ಬಸವಕಲ್ಯಾಣ: ಅಧ್ಯಾತ್ಮದಿಂದ ವ್ಯಕ್ತಿತ್ವದ ವಿಕಾಸವಾಗುತ್ತದೆ. ವ್ಯಕ್ತಿತ್ವ ವಿಕಾಸದಿಂದ ಬದುಕಿನ ಮೌಲ್ಯವರ್ಧನೆಯಾಗಿ ಶಾಂತಿ, ಸಮಾಧಾನ ಲಭಿಸುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಜೋಗೆವಾಡಿ ಗ್ರಾಮದಲ್ಲಿ ಶ್ರೀ ಮಹಾದೇವ ಜಾತ್ರೋತ್ಸವ ನಿಮಿತ್ತ ಆಯೋಜಿಸಿದ್ದ ಅಖಂಡ ಹರಿನಾಮ ಸಪ್ತಾಹ ಹಾಗೂ ಗೋಪಾಲ ಕಲಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಅಹಂಕಾರದ ಬೀಗುವಿಕೆಯಿಂದ ಬದುಕಿನಲ್ಲಿ ಅಮೃತಯಾನ ಫಲಿಸುವುದಿಲ್ಲ, ಮಮಕಾರ ಮತ್ತು ಅಹಂಕಾರದ ಪರದೆ ಕಳಚಿದಾಗ ದೇವನೊಲಿಮೆ ಸಾಧ್ಯವಾಗುತ್ತದೆ ಎಂದರು.

ಹರಿ, ಹರ, ವಿಷ್ಣು, ಮಹದೇವ, ವಿಠಲ, ಪಾಂಡುರಂಗ ಎಂಬಿತ್ಯಾದಿ ನಾಮಂಕಿತಗಳು ಬೇರೆ ಬೇರೆ ಎನಿಸಿದರೂ ತಾಯಿ ಬೇರು ಒಂದೇ ಮೂಲ ಸತ್ವದಲ್ಲಿ ಇರುವಂತಹದು. ಮನಸ್ಸಿನ ನಿರ್ಮಲತೆ ಹಾಗೂ ಶುಭ್ರವಾದ ನಡತೆಯೇ ಮಹಾದೇವನ ನಿಜವಾದ ಪೂಜೆ. ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುವಲ್ಲಿ ಜೋಗೆವಾಡಿ ಗ್ರಾಮದ ಜನತೆ ತಮ್ಮ ವಿಶೇಷತೆಯನ್ನು ಕಾಯ್ದುಕೊಂಡು ಬರುತ್ತಿರುವುದು ಸ್ತುತ್ಯರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗೋವಿಂದ ಗುರೂಜಿ ಸ್ವಾಗತಿಸಿದರು. ಗುರುಪ್ರಸಾದ ಚಿತ್ತಂಪಲ್ಲೆ ವಂದಿಸಿದರು. ಅಣ್ಣೆಪ್ಪ ಚಿತ್ತಂಪಲ್ಲೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net