

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಜರಂಗ ದಳದಿಂದ ನಗರದ ಮಂಗಳವಾರಪೇಟೆಯ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ಆ. 14ರ ರಾತ್ರಿ 10.30ಕ್ಕೆ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ರಾತ್ರಿ 12.01ಕ್ಕೆ ರಾಷ್ಟ್ರ ಧ್ವಜಾರೋಹಣ ಮಾಡಲಾಗುವುದು. ಪ್ರಜ್ಞಾ ಪ್ರವಾಹ ಯುವ ಆಯಾಮ ಸಂಯೋಜಕ ಕಿರಣಕುಮಾರ ವಿವೇಕವಂಶಿ ಮುಖ್ಯ ವಕ್ತರರಾಗಿ ಪಾಲ್ಗೊಳ್ಳುವರು. ಅತಿಥಿಗಳಾಗಿ ಹಿರಿಯ ವಕೀಲ ಎ.ಸಿ. ಚಾಕಲಬ್ಬಿ, ಬಜರಂಗ ದಳ ಜಿಲ್ಲಾ ಸಂಚಾಲಕ ಸಿದ್ದು ಹಿರೇಮಠ, ಇತರರು ಉಪಸ್ಥಿತರಿರುವರು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.