ವೀರವಿಠಲ ದೇವಸ್ಥಾನದಲ್ಲಿ ಅಖಂಡ ಭಜನೆ

udp-18-vitala
Published on

ಉಡುಪಿ: ದಕ್ಷಿಣ ಪಂಢರಾಪುರ ಖ್ಯಾತಿಯ ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಅಂಗವಾಗಿ ಬುಧವಾರ ಅಖಂಡ ಭಜನಾ ಮಹೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಭದ್ರಗಿರಿ ಪಾಂಡುರಂಗ ಆಚಾರ್ಯ, ಗೌರಾವಾಧ್ಯಕ್ಷ ನಾಗರಮಠ ಮಂಜುನಾಥ ನಾಯಕ್​, ಆಡಳಿತ ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರಾದ ಸತೀಶ ಕಿಣಿ ಬೆಳ್ವೆ, ಪ್ರಭಾಕರ ಭಟ್​, ಗಣೇಶ ಪೈ ಪರ್ಕಳ, ಗಿರಿಧರ ರಾವ್​ , ಕೆ.ಸಿ ಪ್ರಭು, ಭದ್ರಗಿರಿ ವಿಠ್ಠಲದಾಸ ಆಚಾರ್ಯ, ಭದ್ರಗಿರಿ ರಘುವೀರ ಆಚಾರ್ಯ, ಭದ್ರಗಿರಿ ವೀರವಿಠ್ಠಲ ಭಜನಾ ಮಂಡಳಿಯ ಸದಸ್ಯರಾದ ಸಿ.ಕೃಷ್ಣ್ಣ ಪೈ, ಕೆ.ಪಿ.ಕಿಣಿ , ಸಿ.ರತ್ನಾಕರ ಪೈ, ಪುರೋಹಿತರಾದ ವೇದಮೂರ್ತಿ ಕಲ್ಯಾಣಪುರ ಕಾಶೀನಾಥ ಭಟ್​, ಕೃಷ್ಣಾನಂದ ಶರ್ಮ, ಅರ್ಚಕರಾದ ಸದಾನಂದ ಆಚಾರ್ಯ ಹಾಗೂ ವೆಂಕಟೇಶ ಶೆಣೈ ,ಗಣೇಶ ಭಟ್​, ಮಹೇಶ ಆಚಾರ್ಯ ,ಲತಾ ಆಚಾರ್ಯ, ಆಶಾ ಆಚಾರ್ಯ, ಪ್ರೇಮಲತಾ ರಾವ್​ ಉಪಸ್ಥಿತರಿದ್ದರು.

ಅಖಂಡ ಭಜನಾ ಮಹೋತ್ಸವದಲ್ಲಿ 14 ಭಜನಾ ಮಂಡಳಿಗಳು ಪಾಲ್ಗೊಂಡು, ಭಜನಾ ಸೇವೆ ಸಲ್ಲಿಸಿದವು. ಉಮೇಶ ಮಲ್ಯರಿಂದ ರಾತ್ರಿ ವಿಶೇಷ ನರ್ತನ ಸೇವೆ ನಡೆಯಿತು. ರಾತ್ರಿಯ ಪ್ರಸನ್ನ ಪೂಜೆಯಿಂದ ಭಜನಾ ಮಂಗಲೋತ್ಸವ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net