

ಮಂಗಳೂರು: ಸಂಸ್ಕೃತ ಭಾರತಿ ಮಂಗಳೂರು ಘಟಕದ ವತಿಯಿಂದ ಗೀತಾ ಜಯಂತಿಯ ಪ್ರಯುಕ್ತ ಗೀತಾಮೃತಮ್ ಅಖಂಡ ಗೀತಾ ಪಾರಾಯಣ ಕಾರ್ಯಕ್ರಮವು ನಗರದ ಸಂಘನಿಕೇತನದಲ್ಲಿ ನಡೆಯಿತು.
ಕ್ಷೇತ್ರೀಯ ಸಂಘ ಚಾಲಕ ಡಾ. ವಾಮನ್ ಶೆಣೈ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಭೋಜೆ ಗೌಡ ಮಾತನಾಡಿ, ಪ್ರತಿಯೊಬ್ಬ ಹಿಂದುವಿನ ಮನೆಯಲ್ಲಿ ಭಗವದ್ಗೀತೆಯ ಪುಸ್ತಕ ಇರಬೇಕು ಹಾಗೂ ಪ್ರತಿಯೊಬ್ಬ ಹಿಂದೂ ಭಗವದ್ಗೀತೆಯನ್ನು ಓದುವುದು ಅವಶ್ಯಕವಾಗಿದೆ ಎಂದರು.
ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮುಖ್ಯ ಅತಿಥಿಯಾಗಿದ್ದರು. ಸಂಸ್ಕೃತ ಭಾರತಿಯ ಅಧ್ಯಕ್ಷ ಡಾ.ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಭಗವದ್ಗೀತೆಯ ಮಹತ್ವದ ಬಗ್ಗೆ ಪ್ರವಚನ ನೀಡಿದರು.
ಪ್ರಾಂತ ಸಂಪರ್ಕ ಪ್ರಮುಖ ಸತ್ಯನಾರಾಯಣ ಕೆ.ವಿ., ಮಹಾನಗರ ಸಂಯೋಜಕಿ ಸಂಧ್ಯಾ ಕಾಮತ್ ಉಪಸ್ಥಿತರಿದ್ದರು.
ಗಣಪತಿ ಪೈ ಪಾರಾಯಣ ನಡೆಸಿಕೊಟ್ಟರು. ಪೂರ್ಣ 700 ಶ್ಲೋಕಗಳ ಪಾರಾಯಣ ಕಾರ್ಯಕ್ರಮದಲ್ಲಿ 500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಶೀಲಾ ಶಂಕರಿ ಸ್ವಾಗತಿಸಿದರು. ಸಂಸ್ಕೃತ ಭಾರತಿಯ ಸದಸ್ಯ ಡಾ.ಮಧುಕೇಶ್ವರ ಶಾಸ್ತ್ರಿ ನಿರೂಪಿಸಿದರು. ಗಜಾನನ ಬೋವಿಕಾನ ವಂದಿಸಿದರು.