ಉದಯನಿಧಿ ವಿರುದ್ಧ ಕಠಿಣ ಕ್ರಮ ಜರುಗಿಸಿ

h6-mirakal
Published on

ಹುಬ್ಬಳ್ಳಿ: ಸನಾತನ ಧರ್ಮದ ಬಗ್ಗೆ ಅವಹೇಳನವಾಗಿ ಮಾತನಾಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಕಠಿಣ ಕ್ರಮ ಜರುಗಿಸಲು ಒತ್ತಾಯಿಸಿ ಮಿರಾಕಲ್ ಜಿಮ್ ಹೆಲ್ತ್ ಕ್ಲಬ್ ವತಿಯಿಂದ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗೆ ಬುಧವಾರ ಮನವಿ ರವಾನಿಸಲಾಯಿತು.

ದೇಶದ ಬಹುಸಂಖ್ಯಾತರ ಭಾವನೆಗಳಿಗೆ ಉದಯನಿಧಿ ಧಕ್ಕೆ ತಂದಿದ್ದಾರೆ. ಇದು ಅಕ್ಷಮ್ಯ. ಮುಂದಿನ ದಿನಗಳಲ್ಲಿ ಇಂಥ ಹೇಳಿಕೆಗಳು ಬರಬಾರದು. ಈ ಹಿನ್ನೆಲೆಯಲ್ಲಿ ಇಂಥವರ ವಿರುದ್ಧ ಶೀಘ್ರವೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕ್ಲಬ್ ಅಧ್ಯಕ್ಷ ಆನಂದ ಬಲವಂತರಾವ್ ಕೊನ್ನೂರಕರ ಅವರು ಶಹರ ತಹಸೀಲ್ದಾರ್ ಕಲಗೌಡ ಪಾಟೀಲ ಅವರ ಮೂಲಕ ಮನವಿ ರವಾನಿಸಿದರು.

ಪದಾಧಿಕಾರಿಗಳಾದ ವೀರೇಶ ಸಂಗಳದ, ಸಿದ್ದಲಿಂಗೇಶ ಮಠದ, ಮುತ್ತಣ್ಣ ಕೆಂಗಪುರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net