ಆಕಾಶವಾಣಿ ಸುದ್ದಿ ವಾಚಕರಾಗಿದ್ದ ಎ.ವಿ.ಚಿತ್ತರಂಜನ್ ದಾಸ್ ಇನ್ನಿಲ್ಲ

Chittaranjan Das
Published on

ಮಂಗಳೂರು: ಆಕಾಶವಾಣಿಯಲ್ಲಿ ನವದೆಹಲಿಯಿಂದ ಪ್ರಸಾರವಾಗುತ್ತಿದ್ದ ಕನ್ನಡ ಸುದ್ದಿ ವಾಚಕರಾಗಿದ್ದ ಮೂಲತಃ ಸುಳ್ಯದ ನೆಲ್ಲೂರು ಕೆಮ್ರಾಜೆ ಗ್ರಾಮದ ಎ.ವಿ.ಚಿತ್ತರಂಜನ್ ದಾಸ್ (61) ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಜಾಹೀರಾತು ಉದ್ಯಮಿ, ಅನುವಾದಕರಾಗಿದ್ದ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದರು. ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಬಂದಿದ್ದ ಅವರು ಬೆಂಗಳೂರಿಗೆ ತೆರಳಲು ಸಿದ್ಧತೆಯಲ್ಲಿದ್ದಾಗ ತೀವ್ರ ಹೃದಯಾಘಾತಕ್ಕೊಳಗಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net