ಅಕಾರಿಗಳು ಮಾಡಿದ ತಪ್ಪಿಗೆ ಕೋರ್ಟ್‌ಗೆ ಅಲೆಯಬೇಕಿದೆ

10-pnp
ಪಾಂಡವಪುರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಮಾತನಾಡಿ ಬಜೆಟ್‌ಗೆ ಸಂಬಂಸಿದಂತೆ ಸಲಹೆ ಸೂಚನೆ ನೀಡಿದರು. ಪುರಸಭೆ ಮುಖ್ಯಾಕಾರಿ ವೀಣಾ, ಸದಸ್ಯರಾದ ಉಮಾಶಂಕರ್, ಜಯಲಕ್ಷ್ಮಮ್ಮ, ಎಲ್.ಅಶೋಕ್, ಗೀತಾ, ಜ್ಯೋತಿಲಕ್ಷ್ಮೀ, ಸರಸ್ವತಿ ಇತರರು ಇದ್ದರು.
Published on

ಪಾಂಡವಪುರ: ಪುರಸಭೆ ಅಕಾರಿಗಳು ಮಾಡುವ ತಪ್ಪಿಗೆ ಸಾರ್ವಜನಿಕರು ವರ್ಷಾನುಗಟ್ಟಲೇ ಕೋರ್ಟ್‌ಗೆ ಅಲೆಯಬೇಕಾಗಿದ್ದು, ಅಕಾರಿಗಳ ನಡೆಯಿಂದ ಜನ ಹುಚ್ಚಾಸ್ಪತ್ರೆ ಸೇರುವುದು ಬಾಕಿಯಾಗಿದೆ ಎಂದು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ 2024-25 ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಮುಖ್ಯಾಕಾರಿ ವೀಣಾ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ, ಸಾರ್ವಜನಿಕರು ನಿರೀಕ್ಷಿತ ಆದಾಯ ಮತ್ತು ಖರ್ಚುಗಳ ಜತೆಗೆ ಪುರಸಭೆ ಆದಾಯದ ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಸಂಪನ್ಮೂಲ ಕ್ರೋಢೀಕರಣದಲ್ಲಿ ಅಕಾರಿಗಳು ವಿಲರಾಗಿರುವ ಬಗ್ಗೆ ಪಟ್ಟಣದ ಹಿರಿಯ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆಗೆ ಸೇರಿದ ಸುಮಾರು 82 ಮಳಿಗೆಗಳಿದ್ದು, ಮೂರು ದಶಕಗಳ ಹಿಂದೆ ನಿಗದಿಪಡಿಸಿದ್ದ ಬಾಡಿಗೆಯನ್ನೇ ಈಗಲೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಇದರಿಂದ ಪುರಸಭೆಯ ಆದಾಯ ಕ್ಷೀಣಿಸುತ್ತಿದೆ. ಮಳಿಗೆಗಳಿಗೆ ಈಗಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬಾಡಿಗೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸಂತೆ ಮೈದಾನದಲ್ಲಿ ವ್ಯಾಪಾರ ಮಾಡುವ ರೈತರು ಮತ್ತು ವ್ಯಾಪಾರಸ್ಥರಿಂದ ಪುರಸಭೆಗೆ ಸಾಕಷ್ಟು ಹಣ ಬರುತ್ತಿದೆ. ಆದರೆ ಮಳೆ ಬಂದಾಗ ಸಂತೆಮಾಳದಲ್ಲಿ ಕಾಲು ಇಡಲು ಸಾಧ್ಯವಾಗದಷ್ಟು ಕೆಸರು ಆವರಿಸುತ್ತದೆ. ಹೀಗಾಗಿ ಸಂತೆ ಮೈದಾನ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಲೈಟ್ ಅಳವಡಿಕೆ, ಹಳ್ಳ ಕೊಳ್ಳಗಳಿಂದ ಕೂಡಿರುವ ರಸ್ತೆ ಅಭಿವೃದ್ಧಿ, ಹಾರೋಹಳ್ಳಿಗೆ ಸ್ಮಶಾನ ಮಂಜೂರಾತಿ, ಪಟ್ಟಣದಲ್ಲಿರುವ ಸ್ಮಶಾನಗಳಿಗೆ ಮೂಲ ಸೌಕರ್ಯ ಒದಗಿಸುವುದು, ಪುರಸಭೆಗೆ ಸೇರಿದ ನಿವೇಶನಗಳು ಒತ್ತುವರಿಯಾಗಿದ್ದು ತೆರವುಗೊಳಿಸಲು ಅಗತ್ಯ ಕ್ರಮ, ಬೀದಿ ದೀಪಗಳ ನಿರ್ವಹಣೆ, ಪುರಸಭೆಯಲ್ಲಿ ಅಕ್ರಮವಾಗಿ ಖಾತೆ ಮತ್ತು ಇ-ಸ್ವತ್ತು ಮಾಡಿಕೊಡಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದರು.

ಪುರಸಭೆ ಮುಖ್ಯಾಕಾರಿ ವೀಣಾ ಮಾತನಾಡಿ, ಮಳಿಗೆಗಳ ಬಾಡಿಗೆ ನಿಗದಿಪಡಿಸಿ ಅನುಮೋದನೆಗಾಗಿ ಜಿಲ್ಲಾಕಾರಿಗೆ ಕಳುಹಿಸಿಕೊಡಲಾಗಿದೆ. ಬಳಿಕ ಮರು ಹರಾಜು ನಡೆಸಿ ಮರುಕಟ್ಟೆ ದರಕ್ಕೆ ಅನುಗುಣವಾಗಿ ಬಾಡಿಗೆ ವಸೂಲಿ ಮಾಡಲಾಗುವುದು. ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಮುಖ್ಯಾಕಾರಿ ಅನೇಕ ತಪ್ಪುಗಳನ್ನು ಎಸಗಿದ್ದಾರೆ. ನಾನು ಬಂದ ಮೇಲೆ ಸುಧಾರಣೆ ಮಾಡಿದ್ದೇನೆ. ಪ್ರತಿಯೊಂದು ಮನೆಗೂ ನೀರು ಕೊಡುವ ಉದ್ದೇಶದಿಂದ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ರಸ್ತೆ ಡಾಂಬರೀಕರಣ ಕಾಮಗಾರಿ ಸ್ಥಗಿತಗೊಂಡಿದೆ. ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡ ಬಳಿಕ ಸುಮರು 4.5 ಕಿ.ಮೀ ರಸ್ತೆ ಡಾಂಬರೀಕರಣ ಮಾಡಲಾಗುವುದು ಎಂದು ತಿಳಿಸಿದರು.

11.37 ಕೋಟಿ ರೂ. ನಿರೀಕ್ಷಿತ ಆದಾಯ: ಆಸ್ತಿ ತೆರಿಗೆ, ಮಳಿಗೆ ಬಾಡಿಗೆ, ನೀರಿನ ಕಂದಾಯ, ನಲ್ಲಿ ಸಂಪರ್ಕ, ಅಭೀವೃದ್ಧಿ ಶುಲ್ಕ, ಕಟ್ಟಡ ಮತ್ತು ಉದ್ದಿಮೆ ಪರವಾನಗಿ, ಎಸ್‌ಡಬ್ಲ್ಯೂಎಂ ಮತ್ತು ಯುಜಿಡಿ ಶುಲ್ಕ, ಪಾರ್ಕಿಂಗ್, ಸಂತೆ ಹರಾಜು, ದಿನವಹಿ ನೆಲವಳಿ ಶುಲ್ಕ ಸೇರಿದಂತೆ ಇತರ ಆದಾಯಗಳಿಂದ 2.87 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಎಸ್‌ಎ್ಸಿ ಮುಕ್ತನಿ, 15ನೇ ಹಣಕಾಸು ಅನುದಾನ, ಕುಡಿಯುವ ನೀರು ಅನುದಾನ, ನಗರೋತ್ಥಾನ ಅನುದಾನ, ಎಸ್‌ಎ್ಸಿ ವೇತನ ಅನುದಾನ ಹಾಗೂ ಎಸ್‌ಎ್ಸಿ ವಿದ್ಯುಚ್ಛಕ್ತಿ ಅನುದಾನದಿಂದ 8.50 ಕೋಟಿ ರೂ. ಸೇರಿದಂತೆ ಒಟ್ಟಾರೆ 11.37 ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ. ಈ ಪೈಕಿ ನಿರೀಕ್ಷಿತ ವೆಚ್ಚ 11.29 ಕೋಟಿ ರೂ.ಗಳಾಗಿದ್ದು, 7.50 ಲಕ್ಷ ರೂ. ಉಳಿತಾಯ ನಿರೀಕ್ಷಿಸಲಾಗಿದೆ ಎಂದು ವೀಣಾ ತಿಳಿಸಿದರು.

ಸಭೆಯಲ್ಲಿ ಪುರಸಭೆ ಸದಸ್ಯರಾದ ಉಮಾಶಂಕರ್, ಜಯಲಕ್ಷ್ಮಮ್ಮ, ಎಲ್.ಅಶೋಕ್, ಗೀತಾ, ಜ್ಯೋತಿಲಕ್ಷ್ಮೀ, ಸರಸ್ವತಿ, ಸಾರ್ವಜನಿಕರಾದ ಲಕ್ಷ್ಮಯ್ಯ, ಜಯರಾಮು, ಎನ್,ಭಾಸ್ಕರ್, ನಾರಾಯಣಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net