

ಕುಶಾಲನಗರ:
ಇಂಡೋನೇಷ್ಯಾದಲ್ಲಿ ನಡೆದ ವಿಶ್ವ ಮಿಕ್ಸ್÷್ಡ ಮಾರ್ಷಲ್ ಆರ್ಟ್ಸ್ ಚಾಂಪಿಯನ್‌ಶಿಪ್‌ನ 10 ವರ್ಷ ದೊಳಗಿನ ಬಾಲಕಿಯರ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಧಾನದ ಜತೆಯಲ್ಲಿ ಚಿನ್ನದ ಪದಕ ಗಳಿಸಿದ ಆಜ್ಞ ಗುರುವಾರ ತನ್ನ ಊರಿಗೆ ಆಗಮಿಸಿದ ಸಂದರ್ಭದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀ ಹನುಮ ಸೇನಾ ಸೇವಾ ಸಮಿತಿ ವತಿಯಿಂದ ಕೂಡಿಗೆ ಕೂಡುಮಂಗಳೂರು ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ತೆರೆದ ವಾಹನದ ಮೂಲಕ ಕೂಡಿಗೆ ಡೇರಿ ಸರ್ಕಲ್, ಕೂಡಿಗೆ ಸೋಮವಾರಪೇಟೆ ಸರ್ಕಲ್ ಮೂಲಕ ಮೆರವಣಿಗೆ ನಡೆಸಲಾಯಿತು. ದಾರಿ ಉದ್ದಕ್ಕೂ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಲಾಯಿತು.
ಈ ಸಂದರ್ಭ ಹನುಮ ಸೇನಾ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಮಂಜುನಾಥ, ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಚಂದ್ರು ಮೂಡ್ಲಿಗೌಡ, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಅರುಣ್ ರಾವ್, ಸಮಿತಿ ಪ್ರಮುಖರಾದ ಕಿಶೋರ್ ಕುಮಾರ್, ಸುನಿಲ್ ರಾವ್, ಧರ್ಮ, ಗುರು ಪ್ರಸಾದ್, ನವೀನ್, ರೀಜೂ, ಕೂಡುಮಂಗಳೂರು ರಾಜ, ಮಂಜು, ಶ್ರೀನಿವಾಸ್, ಸಮಿತಿಯ ನಿರ್ದೇಶಕರು ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.