ಅಜ್ಜಯ್ಯ ದೇವಸ್ಥಾನ ವಾರ್ಷಿಕೋತ್ಸವ

IMG_20241114_153201
Published on
ಹನಗೋಡು: ಇಲ್ಲಿನ ಅಜ್ಜಯ್ಯ ದೇವಸ್ಥಾನದ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ಬುಧವಾರ ವಿಶೇಷ ಪೂಜಾ-ಕೈಂಕರ್ಯಗಳು ಜರುಗಿದವು.
ಲಕ್ಷ್ಮಣತೀರ್ಥ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ಪೂರ್ಣಕುಂಭದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಸಿದರು. ನಂತರ ಅಜ್ಜಯ್ಯನವರ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜೆಗಳು ನೆರವೇರಿದವು. ನಂತರ ಅನ್ನದಾಸೋಹ ನಡೆಸಲಾಯಿತು. ಬುಧವಾರ ರಾತ್ರಿ ದೇವರ ಹರಿಕಥೆ ನಡೆಯಿತು. ಈ ವೇಳೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಪೂಜಾ ಕಾರ್ಯದಲ್ಲಿ ಪ್ರಧಾನ ಆರ್ಚಕ ಶಿವಣ,್ಣ ಮುಖಂಡರಾದ ನಾಗೇಂದ್ರ, ಮರಿಯಣ್ಣ, ನಂಜಪ್ಪ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net