

ಉಡುಪಿ: ಎಲ್.ಐ.ಸಿ ದಕ್ಷಿಣ ಮಧ್ಯ ವಲಯದ ಕ್ರೀಡಾಕೂಟ ಮತ್ತು ವಾಲಿಬಾಲ್ ತಂಡದ ಆಯ್ಕೆ ಪಂದ್ಯಾಟ ಆಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಪ್ರಾರಂಭಗೊಂಡಿತು.
ಎಲ್.ಐ.ಸಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ರಾಜೇಶ್ ವಿ. ಮುಧೋಳ್ ಉದ್ಘಾಟಿಸಿದರು. ಭಾರತ ವಾಲಿಬಾಲ್ ತಂಡದ ಆಟಗಾರ ಶ್ರೀಶೇಖರ್ ಮತ್ತು ವಿಕ್ರಮ್, ಎಲ್.ಐ.ಸಿ ಉಡುಪಿ ವಿಭಾಗದ ಮಾರುಕಟ್ಟೆ ಪ್ರಬಂಧಕ ಬಿಜು ಜೋಸೆಫ್, ಎಲ್.ಐ.ಸಿ ಯ ಕ್ರೀಡಾ ಉತ್ತೇಜನಾ ಮಂಡಳಿಯ ಸದಸ್ಯ ಡಿ.ವಿ.ಎಸ್.ವೈ ಶರ್ಮ ಮತ್ತು ಜೆ. ಸುರೇಶ್, ಉಡುಪಿ ವಿಭಾಗದ ವಿಕ್ರಯ ಪ್ರಬಂಧಕ ಪುರಂದರ, ಕಾರ್ಮಿಕ ಹಾಗೂ ಔದ್ಯೋಗಿಕ ಪ್ರಬಂಧಕ ಎಚ್. ಪ್ರಭಾಕರ್ ಮತ್ತು ಎಮ್.ಎಲ್. ನಾರಾಯಣ ಹಾಗೂ ಉಡುಪಿ ವಿಭಾಗದ ಕ್ರೀಡಾ ಕಾರ್ಯದರ್ಶಿ ಶೇಖರ್ ಪೂಜಾರಿ, ಹಾಜರಿದ್ದರು.
ರಾಷ್ಟ್ರ ಮತ್ತು ರಾಜ್ಯ ಮಟ್ಟದ ಅತ್ಲೀಟ್ಗಳಾದ ಅಪ್ಸರಾ ಕಟೀಲ್, ವಸಂತಿ ಬಿಜೂರು, ಲಲಿತಾ ಜಯರಾಮ್ ಮತ್ತು ಸಿಲ್ವೇನಿಯಾ ಪಾಯಸ್ ಪಂದ್ಯಕೂಟದಲ್ಲಿ ಉಪಸ್ಥಿತರಿದ್ದರು.