

ಹುಬ್ಬಳ್ಳಿ: ಫೆಬ್ರವರಿ 14ರಂದು ಎಲ್ಲೆಡೆ ಪ್ರೇಮಿಗಳ ದಿನ ಆಚರಿಸಿದರೆ, ಇಲ್ಲಿಯ ಕುಸುಗಲ್ಲ ರಸ್ತೆ ಸಂಸ್ಕಾರ ಶಾಲೆಯಲ್ಲಿ ಅಂದು ವಿನೂತನ ಹಾಗೂ ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರೀತಿಯ ಸಂಕೇತವಾಗಿ "ಅಜ್ಜ ಅಜ್ಜಿಯರ ದಿನ, ಹರ್ಷೋತ್ಸವ' ಆಚರಿಸಲಾಯಿತು.
ಇಂಡಿಯನ್ ಬ್ಯಾಂಕ್ ವಲಯ ಕಚೇರಿ ನಿವೃತ್ತ ಅಧಿಕಾರಿ ಡಿ. ಅಶೋಕ ನಾಯಕ ಹಾಗೂ ಯುನೈಟೆಡ್ ಇಂಡಿಯನ್ ಇನ್ಸುರೆನ್ಸ್ ನಿವೃತ್ತ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ ಕರವೀರಶೆಟ್ಟರ ಅತಿಥಿಗಳಾಗಿದ್ದರು.
ಮನೆಯ ಹಿರಿಯರ ಮೇಲೆ ಗೌರವ, ಪ್ರೀತಿ ಹೆಚ್ಚಿಸುವ ನಿಟ್ಟಿನಲ್ಲಿ ಈ ದಿನವನ್ನು ಏರ್ಪಡಿಸಿ ಹಿರಿಯರಲ್ಲಿ ಸಂತಸ ಮನೆ ಮಾಡುವಂತೆ ಮಾಡಿತ್ತು. ಅಜ್ಜ ಅಜ್ಜಿಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಹಳ ಸಂತೋಷದಿಂದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ನೃತ್ಯಗಳನ್ನು ಪ್ರದರ್ಶಿಸಿ ಅಜ್ಜ ಅಜ್ಜಿಯರ ಮನಸ್ಸನ್ನು ಸೂರೆಗೊಂಡರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ, ಅಧ್ಯಕ್ಷ ಮಹಾವೀರ ಕುಂದೂರ, ಉಪಾಧ್ಯಕ್ಷ ಕಾಂತಿಲಾಲ್ ಬೋಹರಾ, ಪ್ರಾಂಶುಪಾಲ ಡಾ. ವಿನಯ್ ವರ್ಮಾ, ಕ್ರಿಕೆಟ್ ತರಬೇತುದಾರ ಬಾಬಾ ಭೂಸದ್, ನೈನಾ ಪಿ.ಸಿ, ಅನು ಮಸ್ಕರಾ, ವಿನೋದ್ ಎಸ್, ಶಾಲಾ ಸುಧಾರಣಾ ಸಮಿತಿಯ ಸದಸ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ನಿಕುಂಜ ನಾಯ್ಕ ಮತ್ತು ವಿವಾನ ಭೂಸದ ಕಾರ್ಯಕ್ರಮ ನಿರೂಪಿಸಿದರು. ಜಿಯಾಂಶ್ ಮಹಾಜನ ಸ್ವಾಗತಿಸಿದರು. ಅಥರ್ವ ರಾಯ್ಕರ ಮತ್ತು ಆನ್ವಿ ರಾಯನ್ನವರ ಅತಿಥಿಗಳ ಪರಿಚಯ ಮಾಡಿದರು. ಸಾಯಿ ರಾಯ್ಕರ ವಂದಿಸಿದರು.