ಮುತ್ತಿನ ಸಹೋದರರಿಗೆ ಸನ್ಮಾನ

Ajitha Muttina, Bahubali Muttina, Chadachana, Kashiyatra,
ಚಡಚಣ ಪಟ್ಟಣದ ಸಂಗಮೇಶ್ವರ ದೇವಸ್ಥಾನದಲ್ಲಿ ಪ್ರಸಿದ್ಧ ವರ್ತಕ ಅಜಿತ ಮುತ್ತಿನ, ಬಾಹುಬಲಿ ಮುತ್ತಿನ ಸನ್ಮಾನಿಸಲಾಯಿತು. ಬಾಬುಗೌಡ ಪಾಟೀಲ, ರಾಮ ಅವಟಿ, ಪ್ರಭಾಕರ ನಿರಾಳೆ ಇತರರಿದ್ದರು.
Published on

ಚಡಚಣ: ಪಟ್ಟಣದ ಪ್ರಸಿದ್ಧ ವರ್ತಕ ಅಜಿತ ಮುತ್ತಿನ, ಬಾಹುಬಲಿ ಮುತ್ತಿನ ಅವರು 2400 ಜನರನ್ನು 1 ವಾರ ತಮ್ಮ ಸ್ವಂತ ಖರ್ಚಿನಲ್ಲಿ ಕಾಶಿಯಾತ್ರೆಗೆ ಕರೆದುಕೊಂಡು ಹೋದ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ಪಟ್ಟಣದ ಸಂಗಮೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು.

ಮುತ್ತಿನ ಸಹೋದರರ ಈ ಮಹತ್ವದ ಕಾರ್ಯಕ್ಕಾಗಿ ಹಾಗೂ ಅವರ ಈ ನಿಸ್ವಾರ್ಥ ಸೇವೆ ಸ್ಮರಿಸಲು ಪಟ್ಟಣದ ಮುಖಂಡರು ಸನ್ಮಾನ ಮಾಡಿದರು. ಪಟ್ಟಣದ ಪ್ರಮುಖರು, ಧಾರ್ಮಿಕ ಮುಖಂಡರು ಮತ್ತು ಯಾತ್ರೆಯಲ್ಲಿ ಭಾಗವಹಿಸಿದ ಹಲವಾರು ಭಕ್ತರು ಉಪಸ್ಥಿತರಿದ್ದರು. ಗ್ರಾಮಸ್ಥರು ಮುತ್ತಿನ ಅವರ ಕಾರ್ಯ ಶ್ಲಾಘಿಸಿ ಅವರು ತೋರಿದ ಈ ಜನಪರ ಸೇವಾ ಮನೋಭಾವ ಇತರರಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಅಜಿತ ಮುತ್ತಿನ ಹಾಗೂ ಬಾಹುಬಲಿ ಮುತ್ತಿನ ಅವರನ್ನು ಗಣ್ಯರಾದ ಬಾಬುಗೌಡ ಪಾಟೀಲ, ರಾಮ ಅವಟಿ, ಪ್ರಭಾಕರ ನಿರಾಳೆ, ಡಾ.ಡಿ.ಬಿ.ಕಟಗೇರಿ, ಜಿ.ಡಿ.ಪಾವಲೇ, ಎಸ್.ಕೆ.ಕುಲಕರ್ಣಿ ಹಾಗೂ ಎಸ್.ಆರ್. ಅವಜಿ, ವಿದ್ಯಾ ಕಲ್ಯಾಣಶೆಟ್ಟಿ ಸನ್ಮಾನಿಸಿದರು. ಮುತ್ತಿನ ಅವರಿಗೆ ಕಾವ್ಯ ಕನ್ನಿಕೆ ಎಂಬ ಪುಸ್ತಕವನ್ನು ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net