

ಕಾರ್ಕಳ: ಅಜೆಕಾರು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತಿಂಗಳ ಸಂಭ್ರಮ ಬಳಗವು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು ಅಜೆಕಾರು ಹೋಬಳಿ ಘಟಕ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಅಂಗನವಾಡಿ ಮಕ್ಕಳ ಮೇಳ ನಡೆಯಿತು. ಯಾವುದೇ ಭಾಷಣವಿಲ್ಲದೆ ಉದ್ಘಾಟನಾ ಸಮಾರಂಭ ಮಕ್ಕಳ ಮೇಳ ವಿಶಿಷ್ಟವಾಗಿ ಹಿರಿಯ ನಾಗರಿಕರ ಮಹಿಳೆಯರಾದ ಹಿರಿಯರಾದ ಲಿಲ್ಲಿ ಮೌರಿಸ್ ತಾವ್ರೋ, ಗಿರಿಜಾ ಶಂಕರ ಆಚಾರ್ಯ, ಫಿಲೋಮಿನಾ ಅಂದ್ರಾದೆ, ಕಲ್ಯಾಣಿ ನಾಯ್ಕ, ಸುಶೀಲಾ ಹೆಗ್ಡೆ, ಲೀನಾ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಜೆಕಾರು ಪೇಟೆಯಿಂದ ಶಾಲೆಯವರೆಗೆ ಚೆಂಡೆ, ಗೊಂಬೆ ಬಳಗ, ಕೊಂಬು ಸಹಿತ ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆ ನಡೆದಿದ್ದು, ಹಿರಿಯರಾದ ರಾಮ ಮಡಿವಾಳ ಚಾಲನೆ ನೀಡಿದರು. ಹರೀಶ ಅಧಿಕಾರಿ, ಅರುಣ್ ಬ್ರಹ್ಮಾವರ ಡಾ.ಶೇಖರ ಅಜೆಕಾರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಪ್ರೇರಣಾ ಜಾನಪದ ಕಲಾ ತಂಡ ಚೇರ್ಕಾಡಿ ಮತ್ತು ನಂದಗೋಕುಲ ಮಹಿಳಾ ಚೆಂಡೆ ಬಳಗ ಮಾರ್ಪಳ್ಳಿ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಅಂಗನವಾಡಿ ಕೇಂದ್ರ ಕಡ್ತಲ, ಕುರ್ಸುಕಟ್ಟೆ, ಎಣ್ಣೆಹೊಳೆ, ಕೈಕಂಬ, ಅಜೆಕಾರು, ಗುಡ್ಡೆಯಂಗಡಿ, ದೆಪ್ಪುತ್ತೆ, ಕಾಡುಹೊಳೆ, ದಾಸಗದ್ದೆ, ಬೊಂಡುಕುಮೇರಿ, ರೆಂಜ ಪಾಲ್ಗೊಂಡಿದ್ದವು. ಶಿಕ್ಷಕಿಯರಾದ ಶಕುಂತಳಾ, ಕೀರ್ತಿ, ಮಮತಾ, ಬೆನಿಡಿಕ್ಟ, ವಿದ್ಯಾ, ಸುಲೋಚನಾ, ನಂದಿನಿ, ಪೂರ್ಣಿಮಾ, ಪುಷ್ಟಾ ಮತ್ತು ಸಹಾಯಕಿಯರಾದ ಸಂಪುರ್ಣ, ಜಲಜಾಕ್ಷಿ, ಲತಾ, ಉಷಾ ಕಾಡುಹೊಳೆ, ಜಯಲಕ್ಷ್ಮೀ, ಲಕ್ಷ್ಮೀ, ಸುಮನಾ, ಸುಮತಿ ತೆರಸಾ ತಾವ್ರೋ ತಮ್ಮ ಪುಟಾಣಿ ಮಕ್ಕಳು ಮತ್ತು ಹೆತ್ತವರೊಂದಿಗೆ ಉಪಸ್ಥಿತರಿದ್ದರು. ಎಣ್ಣೆಹೊಳೆ ಶಾಲೆಯ ಕೀರ್ತಿ ಮತ್ತು ಸಂಪೂರ್ಣ ಅವರು ಅತಿ ಹೆಚ್ಚು ಮಕ್ಕಳು ಭಾಗವಹಿಸುವಂತೆ ಮಾಡಿ ಸರ್ವರ ಪ್ರಶಂಸೆಗೆ ಪಾತ್ರರಾದರು.