ಬೀರೂರು ರೈಲ್ವೆ ಜಂಕ್ಷನ್ ಅಭಿವೃದ್ಧಿಗೆ ಮನವಿ

web 2 (1)
Published on

ಬೀರೂರು: ಪಟ್ಟಣದ ರೈಲು ನಿಲ್ದಾಣಕ್ಕೆ ಜಿಲ್ಲೆಯಲ್ಲೇ ಪ್ರಮುಖ ಸ್ಥಾನವಿದೆ. ಪ್ರಯಾಣಿಕರು ಹಾಗೂ ವಾಣಿಜ್ಯ ಬಳಕೆ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿರುವುದರಿಂದ ನಿಲ್ದಾಣದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ನಾಗರಿಕ ಬಳಕೆದಾರರ ವೇದಿಕೆ ಸದಸ್ಯರು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್ಕುಮಾರ್ ಸಿಂಗ್​ಗೆ ಮನವಿ ಸಲ್ಲಿಸಿದರು.

ಬೀರೂರು ನಿಲ್ದಾಣಕ್ಕೆ 154 ವರ್ಷಗಳ ಇತಿಹಾಸವಿದೆ. ಪ್ಲಾಟ್​ಫಾರಂ ನಡುವಿನ ಲಿಫ್ಟ್ ಅಳವಡಿಕೆ ಕಾಮಗಾರಿ ಮುಕ್ತಾಯವಾಗಬೇಕಿತ್ತು. ಈವರೆಗೂ ಕೆಲಸ ಪೂರ್ಣಗೊಳ್ಳದೆ ಆಮೆ ನಡಿಗೆಯಲ್ಲಿ ಸಾಗಿದೆ. ಇಲಾಖೆ ಸಿಬ್ಬಂದಿಗೆ ನಿರ್ವಣವಾಗಬೇಕಿದ್ದ ವಿಶ್ರಾಂತಿ ಗೃಹದ ಕಾಮಗಾರಿಯೂ ನನೆಗುದಿಗೆ ಬಿದ್ದಿದೆ. ಯಶವಂತಪುರ-ನಿಜಾಮುದ್ದೀನ್, ಮೈಸೂರು-ವಾರಾಣಸಿ, ಬೆಂಗಳೂರು-ಬೆಳಗಾವಿ ಸೇರಿ ಹಲವು ರೈಲುಗಳಿಗೆ ನಿಲುಗಡೆ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಬೆಳಗಾವಿ-ಮೈಸೂರು, ಮಂಗಳೂರು-ವಿಜಯಪುರ, ಯಶವಂತಪುರ-ವಿಜಯಪುರ ಎಕ್ಸ್​ಪ್ರೆಸ್ ರೈಲುಗಳನ್ನು ಪುನರಾರಂಭಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net