

ಆಲಮೇಲ: ಜನತೆ ಋಣ ತೀರಿಸಲು ಅಭಿವೃದ್ಧಿಗೆ ಒತ್ತು ನೀಡಿ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವಂತಹ ಕೆಲಸವಾಗಬೇಕು. ಅಂದಾಗ ಮಾತ್ರ ಶಾಸಕ ನಿಜವಾದ ಜನ ಪ್ರತಿನಿಧಿಯಾಗಲು ಸಾಧ್ಯ ಎಂದು ಅಜಲಪುರ ಶಾಸಕ ಎಂ.ವೈ.ಪಾಟೀಲ ಹೇಳಿದರು.
ಆಲಮೇಲ ತಾಲೂಕಿನ ನಾಗರಳ್ಳಿ ಗ್ರಾಮಸ್ಥರು ಶನಿವಾರ ಹಮ್ಮಿಕೊಂಡಿದ್ದ ನೂತನ ಶಾಸಕರು ಹಾಗೂ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ಯುವ ಉತ್ಸಾಹಿಗಳಾಗಿದು, ಕ್ಷೇತ್ರದ ಜನತೆಯ ವಿಶ್ವಾಸದೊಂದಿಗೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಜನರು ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸಿ ಎಂದರು.
ರಾಮನಳ್ಳಿ ಗ್ರಾಪಂ ನೂತನ ಅಧ್ಯಕ್ಷ ತಮ್ಮಜೀದ ಖಾನ್‌ಪಟೇಲ ಮಾತನಾಡಿ, ಶಾಸಕರ ಮಾರ್ಗದರ್ಶನದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿದರು. ಮುಖಂಡರಾದ ರಮೇಶ ಬಂಟನೂರ, ಬಸವರಾಜ ಬಾಗೇವಾಡಿ, ಅಪ್ಪುಗೌಡ ಪಾಟೀಲ (ಹೂವಿನಹಳ್ಳಿ), ಬಂದೇನವಾಜ ಖಾನಪಟೇಲ, ಮಹಾದೇಪ್ಪ ಹಚಡದ, ಚನ್ನಮಲ್ಲಪ್ಪ ಹಚಡದ, ಧರ್ಮರಾಯ ಪಾಟೀಲ, ಗುರುರಾಜ ಪಾಟೀಲ, ಅಣ್ಣಾರಾಯ ಬಿರಾದಾರ, ಅಂಜುಮನ್ ಕಮಿಟಿಯ ಅಧ್ಯಕ್ಷ ಜಬ್ಬಾರ ಮಣ್ಣೂರ ಇತರರಿದ್ದರು.