

ಉಡುಪಿ: ಶಿವಾಜಿ ಮತ್ತು ನೇತಾಜಿಯವರು ದೇಶ ದಾಸ್ಯತ್ವದ ಕಾಲದಲ್ಲಿ ಜನಿಸಿದವರು. ಇಬ್ಬರ ತಂದೆಯವರು ಗುಲಾಮಿ ಶಾಸನದ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಪಿತೃವಾಕ್ಯ ಧಿಕ್ಕರಿಸಿ ರಾಷ್ಟ್ರ ಹಿತ ಸರ್ವೋಪರಿ ಎಂಬ ನಿಲುವು ತಳೆದಿದ್ದರು ಎಂದು ಮಹಾರಾಷ್ಟ್ರದ ವಾಗ್ಮಿ ಡಾ. ಸಂದೀಪ್ ಮಹಿಂದ್ ಹೇಳಿದರು
ಶನಿವಾರ ಅಜ್ಜರಕಾಡು ಪುರಭವನದಲ್ಲಿ ಕೂರ್ಮ ಫೌಂಡೇಶನ್‌ನ ವತಿಯಿಂದ ಆಯೋಜಿಸಿದ್ದ ಆಜಾದ್ ಹಿಂದ್ ಶಿವಾಜಿಯಿಂದ ನೇತಾಜಿಯವರೆಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
1947ರಲ್ಲಿ ಬಿಳಿ ಬಣ್ಣದ ಬ್ರಿಟಿಷರು ತೊರೆದು ಹೋಗಿದ್ದರೂ ದೇಶದಲ್ಲಿ ಕಪ್ಪು ಬಣ್ಣದ ಬ್ರಿಟಿಷ್ ಮಾನಸಿಕತೆಯವರು ಆಳ್ವಿಕೆ ಮುಂದುವರಿಸಿದ್ದರು. ಇದರಿಂದಾಗಿ ದೇಶದ ನೈಜ ಇತಿಹಾಸ ಮರೆಮಾಚೋ ಕೆಲಸ ನಡೆದಿದೆ ಎಂದರು.
ಪತ್ರಕರ್ತ ಅಜಿತ್ ಹನುಮಕ್ಕನವರ್, ಇತಿಹಾಸದಲ್ಲಿ ದಾಖಲಾಗದೇ ಉಳಿದ ವಿಚಾರಗಳು, ಗ್ರಂಥಾಲಯದೊಳಗೆ ಹಾಗೂ ಶಾಲಾ ಪಠ್ಯದೊಳಗೆ ಬಾರದಂತೆ ತಡೆಯಲಾದ ವಿಚಾರಗಳು ಪ್ರಸ್ತುತ ಅಗ್ಗದ ಇಂಟರ್‌ನೆಟ್‌ನಿಂದಾಗಿ ಸುಲಭವಾಗಿ ಜನರಿಗೆ ತಲುಪುತ್ತಿದೆ. ದೇಶದ ಪರಂಪರೆ, ಇತಿಹಾಸದ ಬಗ್ಗೆ ನೈಜ ವಿಚಾರ ತಿಳಿಯುತ್ತಿದೆ ಎಂದರು.
ಭಾರತ ವಿಶ್ವದ ಅಗ್ರಗಣ್ಯ ದೇಶವಾಗುತ್ತಿದ್ದು, ತನಗೆ ಶಕ್ತಿ ಬಂದಾಗ ಇನ್ನೊಬ್ಬರ ಮೇಲೆ ಯುದ್ಧ ಮಾಡಿಲ್ಲ ಬೆಳಕು ನೀಡಿದೆ ಎಂಬುದು ಪ್ರತಿಯೊಬ್ಬರಿಗೂ ಅರ್ಥವಾಗುತ್ತಿದೆ. ಇಂಥ ಕಾಲಘಟ್ಟದಲ್ಲಿ ಜೀವಿಸುತ್ತಿರುವುದು ನಮ್ಮ ಸೌಭಾಗ್ಯ ಎಂದರು.
ಕೂರ್ಮಫೌಂಡೇಶನ್‌ನ ಶ್ರೀಕಾಂತ್ ಶೆಟ್ಟಿ ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿ ಅಜಯ್ ಪಿ. ಶೆಟ್ಟಿ ಉಪಸ್ಥಿತರಿದ್ದರು. ಗಾಯಕ ರಜತ್ ಮಯ್ಯ ಮತ್ತು ತಂಡದಿದ ರಾಷ್ಟಗೀತೆ ಸ್ವರಭಾತಿ ಕಾರ್ಯಕ್ರಮ ಹಾಗೂ ಮಂಜರಿಚಂದ್ರ ಮತ್ತು ಕಲಾವದರಿಂದ ನಮೋ ನಮೋ ಭಾರತಾಂಬೆ ನೃತ್ಯ ರೂಪಕ ಪ್ರದರ್ಶನಗೊಂಡಿತು.