ಎಜೆ ಆಸ್ಪತ್ರೆಯಿಂದ ಮೃತ ಸುಹಾಸ್‌ ಶೆಟ್ಟಿ ಅಂತಿಮ ಯಾತ್ರೆ ಆರಂಭ

IMG-20250502-WA0017
Published on

ಮಂಗಳೂರು : ಗುರುವಾರ ರಾತ್ರಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಅವರ ಅಂತಿಮ ಯಾತ್ರೆ ಮಾಡಲು ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದಿಂದ ದ.ಕ ಜಿಲ್ಲೆ ನಿರ್ಧರಿಸಿದ್ದು, ಸಕಲ ಸಿದ್ಧತೆಯೊಂದಿಗೆ ಆರಂಭಗೊಂಡಿದೆ.

ಹತ್ಯೆಯ ಪ್ರಕರಣ ಸಂಬಂಧ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದಿಂದ ದ.ಕ ಜಿಲ್ಲೆ ಬಂದ್ ಗೆ ಕರೆ ನೀಡಿರುವ ಜೊತೆಗೆ ಸಾವಿರಾರು ಹಿಂದೂ ಕಾರ್ಯಕರ್ತರು ಅಂತಿಮ ಯಾತ್ರೆಯಲ್ಲಿ ಭಾಗವಸಿದರು.

ಶುಕ್ರವಾರ ಬೆಳಗ್ಗೆ 10:30ಕ್ಕೆ ಎಜೆ ಆಸ್ಪತ್ರೆಯಿಂದ ಕಾರಿಂಜದ ತನಕ ಸುಹಾಸ್ ಅಂತಿಮ ಯಾತ್ರೆ ನಡೆಯಲಿದೆ. ಹತ್ಯೆಯನ್ನು ಖಂಡಿಸಿ ಪ್ರಾಂತದ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಂಘಟನರಗಳಿಂದ ಪ್ರತಿಭಟನೆಗಳು ಆಯೋಜಿಸಲಾಗುವುದು ಎಂದು ವಿಹಿಂಪ ಪ್ರಾಂತ ಸಂಯೋಜಕರಾಸ ದೋ ಕೇಶವಮೂರ್ತಿ ಈಗಾಗಲೇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದ್ಯಕ್ಕೆ ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಈ ಸಂದರ್ಭ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net