ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಎಐಯುಟಿಯುಸಿ ಸಂಘದಿAದ ಧರಣಿ

ಎಐಯುಟಿಯುಸಿ ಸಂಘದಿAದ ಧರಣಿ
ಎಐಯುಟಿಯುಸಿ ಸಂಘದಿAದ ಧರಣಿ
Published on

ರಾಯಚೂರು ಕಾರ್ಮಿಕ ಸಂಹಿತೆ ಜಾರಿಗೊಳಿಸುವದನ್ನು ಕೈ ಬಿಟ್ಟು, ಎಲ್ಲಾ ಗುತ್ತಿಗೆ ಕಾರ್ಮಿಕರನ್ನ ಖಾಯಂಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಎಐಯುಟಿಯುಸಿ ಜಿಲ್ಲಾ ಘಟಕದ ಪದಾಽಕಾರಿಗಳು ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಧರಣಿ ನಡೆಸಿದರು.

ದೇಶವ್ಯಾಪಿ ನಡೆದಿರುವ ಮುಷ್ಕರ ಭಾಗವಾಗಿ ಪ್ರತಿಭಟನಾ ಧರಣಿ ನಡೆಸಿದ ಕಾರ್ಮಿಕರು ಪಿಎ-ï, ಇಎಸ್‌ಐ ಸೌಲಭ್ಯ ಪಡೆಯಲು ವಿಽಸಲಾಗಿರುವ ವೇತನ ಮಿತಿಯನ್ನು ರದ್ದುಗೊಳಿಸಬೇಕು. ಎಲ್ಲಾ ಕಾರ್ಮಿಕರಿಗೂ ಸಮಾಜಿಕ ಭದ್ರತಾ ಯೋಜನೆಗಳ ಖಾತ್ರಿ ನೀಡಬೇಕು. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಆಶಾ,ಬಿಸಿಯೂಟ, ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಟ ವೇತನ ೩೧ ಸಾವಿರ ರೂ ನಿಗಧಪಡಿಸಬೇಕು.

ಜಿಲ್ಲೆಯಲ್ಲಿರುವ ಇಎಸ್‌ಐ ಡಿಸ್ಪೇನರಿಯನ್ನು ಮೇಲ್ದರ್ಜೆಗೇರಿ, ಬೀದರ ಜಿಲ್ಲೆಯ ಮಾದರಿಯಂತೆ ಜಿಲ್ಲೆಯಲ್ಲಿಯೂ ಕಾರ್ಮಿಕರ ವಿವಿದ್ದೋದ್ದೇಶ ಸಹಕಾರ ಸಂಘ ರಚಿಸಬೇಕು. ಕೈಗಾರಿಕಾ ಪ್ರದೇಶದಲ್ಲಿರುವ ಪ್ರಮುಖ ಉದ್ಯಮಗಳಾದ ಶಿಲ್ಪಾ -Áರ್ಮಾ ಲೈ-ï ಸೈನ್ಸ್, ರಾಯಕೇಮ್ ಮೇಡಿಕೇರ್, ಆರ್‌ಟಿಪಿಎಸ್,ವೈಟಿಪಿಎಸ್ ಕೈಗಾರಿಕೆಗಳಲ್ಲಿ ದೀರ್ಘ ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರನ್ನುಖಾಯಂಗೊಳೀಸುವAತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ತಿರುಮುಲರಾವ್, ಉಪಾಧ್ಯಕ್ಷ ಅಣ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಮಹೇಶ ಚಿಕಲಪರ್ವಿ, ಆಶಾ ಸಂಘಟನೆಯ ಈರಮ್ಮ, ರಾಧಾ, ಲಕ್ಷ್ಮೀ, ಪ್ರಭಾ,ಕರಿಲಿಂಗ, ಶರಣಗೌಡ, ಚೇತನಕುಮಾರ, ರಾಮಾಂಜನೇಯ, ಹಾಸ್ಟೇಲ್ ನೌಕರರಾದ ಗಾಯತ್ರಿ, ಮಹೇಶ್ವರಿ, ಅಂಬಿಕಾ,ಹುಚ್ಚಪ್ಪ, ಅಮರೇಶ, ಹುಲಿಗೆಪ್ಪ, ಬಸವರಾಜಸೇರಿದಂತೆ ಅನೇಕ ಕಾರ್ಮಿಕಸಂಘಟನೆಗಳ ಮುಖಂಡರು,ಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net