ನಿವೃತ್ತ ಕಾರ್ಯಕರ್ತೆಯರಿಗೆ ಉಪಧನ ನೀಡಿ, ಸರ್ಕಾರಕ್ಕೆ ಎಐಯುಟಿಯುಸಿಯಿಂದ ಮನವಿ

AIUTUC ANGANAWADI BHATYE
ವಿಜಯಪುರ ಜಿಲ್ಲಾಡಳಿತಕ್ಕೆ ಎಐಯುಟಿಯುಸಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ರೇಣಕಾ ಹಡಪದ, ಶಾಂತಮ್ಮ ಶ. ಹಿರೇಗೌಡರ, ಪದ್ಮಾವತಿ ಕುಲಕರ್ಣಿ ಮತ್ತಿತರರಿದ್ದಾರೆ.
Published on

ವಿಜಯಪುರ: ಅಂಗನವಾಡಿಗಳ ನಿವೃತ್ತ ಕಾರ್ಯಕರ್ತೆಯರಿಗೆ ಉಪಧನ ನೀಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಶನಿವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

1975 ರಿಂದ ಸುದೀರ್ಘಾವಧಿವರೆಗೆ ಗೌರವಧನದ ಆಧಾರದ ಮೇಲೆ ಸೇವೆ ಸಲ್ಲಿಸಿ 2011 ಸಾಲಿನಿಂದ ನಿವೃತ್ತಿಯಾದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಉಪಧನ ನೀಡಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಅತ್ಯಂತ ಕಡಿಮೆ ಗೌರವಧನದಲ್ಲಿ ಕಾರ್ಯಕತೆರ್ಯರು ಸೇವೆ ಸಲ್ಲಿಸಿದ್ದಾರೆ. 2022 ಏಪ್ರಿಲ್ನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು ಆ ಪ್ರಕಾರ ಎಲ್ಲ ನಿವೃತ್ತ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ರಾಜ್ಯ ಸರ್ಕಾರ ಗೌರವ ಧನ ನೀಡಬೇಕಿತ್ತು. ಆದರೆ, 2023ರಿಂದ ನಿವೃತ್ತಿಯಾದ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಉಪಧನ ನೀಡಿ ರಾಜ್ಯದ ಉಳಿದ ಕಾರ್ಯಕರ್ತೆಯರಿಗೆ ಅನ್ಯಾಯ ಮಾಡಿದೆ. ಈ ಅನ್ಯಾಯ ಸರಪಡಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಉಪಾಧ್ಯಕ್ಷೆ ರೇಣಕಾ ಹಡಪದ, ಶಾಂತಮ್ಮ ಶ. ಹಿರೇಗೌಡರ, ಪದ್ಮಾವತಿ ಕುಲಕರ್ಣಿ, ಸಂಗಮ್ಮ ಸಿ.ಹಿರೇಮಠ, ಬಸಮ್ಮ ದೂರನಳ್ಳಿ, ಮಲ್ಲಮ್ಮ ಮ. ಮಡಿವಾಳರ, ನಿಂಗಮ್ಮ ಮಠ, ಸರಸ್ವತಿ ಮದ್ರಿಕಿ, ಲಕ್ಷ್ಮಿ ಲಕ್ಷಟ್ಟಿ , ಗಾಯತ್ರಿ ಜಡಿಮಠ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net