

ಕೋಟ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಸಂಸ್ಥೆಯ ಸಂಸ್ಥಾಪಕ ದಿವಂಗತ ಐರೋಡಿ ಸದಾನಂದ ಹೆಬ್ಬಾರರ ನೆನಪಿನಲ್ಲಿ ನೀಡುವ ಸದಾನಂದ ಪ್ರಶಸ್ತಿಗೆ ಯಕ್ಷಗಾನ ಗುರು, ವಿದ್ವಾಂಸ, ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳರು ಆಯ್ಕೆಯಾಗಿದ್ದಾರೆ. ಅ.25ರಂದು ಸಾಯಂಕಾಲ 5ಕ್ಕೆ ಉಡುಪಿಯ ವಾಸುಕೀನಗರದಲ್ಲಿರುವ ಪ್ರಶಸ್ತಿ ಪುರಸ್ಕೃತರ ಮನೆಯಲ್ಲಿ ಹೆಬ್ಬಾರರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. 2004ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.