ಶಿವಣ್ಣನ​ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಐಶ್ವರ್ಯ ರೈ ಪುತ್ರಿ! ಆರಾಧ್ಯ ಬಚ್ಚನ್ ಸಂಸ್ಕೃತಿ ಮೆಚ್ಚಿದ ಫ್ಯಾನ್ಸ್​

aaradhya
Published on

ಬೆಂಗಳೂರು:  ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ-2024 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೌಂದರ್ಯ ತಾರೆ ಐಶ್ವರ್ಯಾ ರೈ ಮತ್ತು ಅವರ ಪುತ್ರಿ ಆರಾಧ್ಯ ಬಚ್ಚನ್ ವಿಶೇಷ ಆಕರ್ಷಣೆಯಾಗಿದ್ದರು. ಐಶ್ವರ್ಯ ರೈ ಪುತ್ರಿ ಆರಾಧ್ಯ ಬಚ್ಚನ್​ ಕನ್ನಡದ ಸ್ಟಾರ್​ ನಟನ ಕಾಲಿಗೆ ಬಿದ್ದು ಆಶಿರ್ವಾದ ಪಡೆದುಕೊಂಡಿದ್ದಾಳೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.

ಈ ಸಮಾರಂಭದಲ್ಲಿ ಐಶ್ವರ್ಯಾ ರೈ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯಿತು. ಪೊನ್ನಿನ್ ಸೆಲ್ವನ್ ಚಿತ್ರದಲ್ಲಿನ ಅದ್ಭುತ ಅಭಿನಯದ ಪ್ರತೀಕವಾಗಿ ಆಕೆಗೆ ಈ ಪ್ರಶಸ್ತಿ ಲಭಿಸಿದೆ. ಕಾಲಿವುಡ್ ಸ್ಟಾರ್ ಹೀರೋ ಚಿಯಾನ್ ವಿಕ್ರಮ್ ಅವರೊಂದಿಗೆ ವೇದಿಕೆಯಲ್ಲಿ ಐಶ್ವರ್ಯಾ ಪ್ರಶಸ್ತಿ ಸ್ವೀಕರಿಸಿದರು.ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈಗ ಆರಾಧ್ಯಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಟ್ರೆಂಡಿಂಗ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ಐಶ್ವರ್ಯಾ ಮಗಳ ಬಗ್ಗೆ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.

ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವು ಸ್ಟಾರ್ ಹೀರೋಗಳು ಭಾಗವಹಿಸಿದ್ದರು. ಕನ್ನಡ ಇಂಡಸ್ಟ್ರಿಯ ಸ್ಟಾರ್ ಹೀರೋ ಶಿವರಾಜ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿವರಾಜ್ ಕುಮಾರ್ ಮತ್ತು ವಿಕ್ರಮ್ ಒಟ್ಟಿಗೆ ಮಾತನಾಡುತ್ತಿರುವಾಗ ಐಶ್ವರ್ಯಾ ರೈ ಅವರ ಬಳಿ ಬಂದರು. ಶಿವಣ್ಣನ ಕೈ ಕುಲುಕಿ ಯೋಗಕ್ಷೇಮ ಕೇಳಿದಳು. ಅಲ್ಲಿದ್ದ ಮಗಳನ್ನು ಶಿವರಾಜ್‌ಕುಮಾರ್‌ಗೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಆರಾಧ್ಯ ಅವರು ಸೂಪರ್ ಸ್ಟಾರ್ ಶಿವಣ್ಣನವರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದರು. ನಾಯಕ ಕೂಡ ಐಶ್ವರ್ಯ ಮಗಳನ್ನು ಆಶೀರ್ವದಿಸಿ ಶುಭ ಹಾರೈಸಿದರು. ಸದ್ಯ ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net