

ಮದ್ದೂರು: ಪಟ್ಟಣದ ಐಶ್ವರ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯು 2024-25ನೇ ಶೈಕ್ಷಣಿಕ ಸಾಲಿನ ಸಿ.ಬಿ.ಎಸ್.ಸಿ. 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿದೆ.
ಸಿ.ಆರ್.ಪೂರ್ವಿಕಾ ಶೇ.95, ಎಚ್.ವಿ.ತನ್ಮಯ ಶೇ.94, ಬಿ.ಮೋನಿಷಾ ಶೇ.94, ಎಸ್.ಹೃಷಿಕಾ ಶೇ.94, ಎಸ್.ನಯನಗೌಡ ಶೇ.92, ರಕ್ಷ ಅನುಪ್ರಿಯಾ ಶೇ.92, ಎಂ.ಆರ್.ಸುಬ್ರಹ್ಮಣ್ಯ ಶೇ.92, ಎನ್.ಥೈಲಾನ್ಯ ಶೇ.22, ಶ್ಯಾಮ್‌ಸಿಯಾಆಮದಿ ಶೇ.91, ಹುಮ್ರಾಸಿದ್ದಿಕಾ ಶೇ.90, ರೂಕಾಯ್ಯ ಶೇ.90 ರಷ್ಟು ಫಲಿತಾಂಶ ಪಡೆದು ಶಾಲೆಗೆ ಮತ್ತು ಪಾಲಕರಿಗೆ ಕೀರ್ತಿ ತಂದಿದ್ದಾರೆ.
ಒಟ್ಟು 74 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 43 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಮತ್ತು 31 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಕಾರ್ಯದರ್ಶಿ ಡಾ.ಜೆ.ನಂದೀಶ್ ಹಾಗೂ ಪ್ರಾಂಶುಪಾಲರಾದ ವಿಂಧ್ಯಾ ಬೋಪಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದು, ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಹಾಗೂ ಶಿಕ್ಷಕ ವೃಂದದವರಿಗೆ ಅಭಿನಂದನೆ ತಿಳಿಸಿದ್ದಾರೆ.