ಐಶ್ವರ್ಯ ಇನ್ನೋವೇಟಿವ್ ಕಾಲೇಜು ಸಾಧನೆ

09M.D.R.1 Syeda Rifa Kousar (572 95.3%) Taluk 2nd Rank
ಸೈಯೆದಾ ರಿಫಾ ಕೌಸರ್
Published on

 ಮದ್ದೂರು: ಪಿಯು ಪರೀಕ್ಷೆಯಲ್ಲಿ ಪಟ್ಟಣದ ಐಶ್ವರ್ಯ ಇನ್ನೋವೇಟಿವ್ ಪಿಯು ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಶೇ.100ರಷ್ಟು ಫಲಿತಾಂಶ ಲಭಿಸಿದೆ.

ಪರೀಕ್ಷೆ ತೆಗೆದುಕೊಂಡ 42 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 23 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು ಮೂವರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸೈಯೆದಾ ರಿಫಾ ಕೌಸರ್ ಶೇ.95.3(572) ಅಂಕಗಳನ್ನು ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಹಾಗೂ ತನುಪ್ರಿಯಾ ಶೇ.95.1(571) ಅಂಕಗಳನ್ನು ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಪೂನಮ್ ಪಿ.ಪಾಟೀಲ್ ಶೇ.94.5(575), ಚೈತಾಲಿ ವರ್ಧನ್ ಶೇ.91.3(548), ಯಶವಂತ ಶೇ.86.3(518) ಹಾಗೂ ಹೇಮಲತಾ ಶೇ.86.1 (517) ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ನಮ್ರತಾ ಶೇ.94.2(565), ಎನ್.ಆರ್.ಶ್ರವಣ್ ಶೇ.94.2(565), ಟಿ.ಎಂ.ತೇಜಾಂಜನ ಶೇ.91.3(548), ಎಂ.ಕೆ.ಸಿಂಚನಾ ಶೇ.91.2(547), ಎಸ್.ಬಿಂಧುಶ್ರೀ ಶೇ.91.8(551) ಅಂಕ ಪಡೆದಿದ್ದಾರೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನಮ್ರತಾ ರವಿ ಗಣಿತ ವಿಷಯದಲ್ಲಿ 100ಕ್ಕೆ 100 ಅಂಕ ಹಾಗೂ ಎ.ಆರ್.ರಕ್ಷಾ ಜೀವಶಾಸ್ತ್ರ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಅತ್ಯುತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿರುವ ಎಲ್ಲ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net