ಆಯಿಶಾಬಾನು ಅಧ್ಯಕ್ಷೆ, ವೀರಭದ್ರಯ್ಯ ಉಪಾಧ್ಯಕ್ಷ

9 Yakkundi 1-Web
ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯಿಶಾಬಾನು ಅಬುಬಕರ ಬಾರಿಗಿಡದ, ಉಪಾಧ್ಯಕ್ಷರಾಗಿ ವೀರಭದ್ರಯ್ಯ ಪತ್ರಯ್ಯ ಮಠದ ಅವಿರೋಧವಾಗಿ ಆಯ್ಕೆಯಾದರು. ಗ್ರಾಪಂ ಸದಸ್ಯರಾದ ಮಹೇಶ ಪತ್ರೆಪ್ಪ ಹೊಂಗಲ, ಅಬ್ದುಲ್‌ಖಾದರಜೈಲಾನಿ ಬಾರಿಗಿಡದ ಇದ್ದರು.
Published on

ಯಕ್ಕುಂಡಿ: ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ನಡೆಸಲಾಯಿತು.
ಅಧ್ಯಕ್ಷರಾಗಿ ಆಯಿಶಾಬಾನು ಅಬುಬಕರ್ ಬಾರಿಗಿಡದ ಹಾಗೂ ಉಪಾಧ್ಯಕ್ಷರಾಗಿ ವೀರಭದ್ರಯ್ಯ ಪತ್ರಯ್ಯ ಮಠದ ಅವರು ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷರಾಗಿ ಆಯ್ಕೆಯಾದ ಆಯಿಶಾಬಾನು ಬಾರಿಗಿಡದ ಅವರು ಮಾತನಾಡಿ, ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಿಗೆ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಎಲ್ಲ ಗ್ರಾಮಗಳ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿದರು.

ಸವದತ್ತಿಯ ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ಆರ್.ಆರ್. ಕುಲಕರ್ಣಿ ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಪಿಡಿಒ ಎನ್. ಶ್ರೀಶೈಲಗೌಡ, ಗ್ರಾಮದ ಹಿರಿಯರಾದ ಬಸವರಾಜ ಹೊಂಗಲ, ಶಂಕರಗೌಡ ಪಾಟೀಲ, ಹಾಸೀಮ ನಾಶಿಪುಡಿ, ಮೋಹನರಾವ ದೇಸಾಯಿ ಇತರರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ ಪತ್ರೆಪ್ಪ ಹೊಂಗಲ, ಅಬ್ದುಲ್‌ಖಾದರಜೈಲಾನಿ ಬಾರಿಗಿಡದ, ಇರ್ಫಾನ್ ಮುಜಾವರ, ಕೃಷ್ಣ ಕಂಬಾರ, ಫಾತೀಮಾಬೇಗಂ ಬಾರಿಗಿಡದ, ನಾಗಪ್ಪ ನಡುವಿನಹಳ್ಳಿ, ಸಂಜೀವ ನಾಯ್ಕರ, ವಿಮಲಾಕ್ಷೀ ದೊಡವಾಡ, ಮಕ್ತುಂಬಿ ಮುಜಾವರ, ಖಾನಬಿ ಮದ್ಲೂರ, ಮುತ್ತವ್ವ ಬಡಿಗೇರ, ಅಶ್ವಿನಿ ತಳವಾರ, ಫಕೀರವ್ವ ಜುಮ್ಮನ್ನವರ, ಯಲ್ಲವ್ವ ಮಾದರ, ಸುಜಾತಾ ಮಾದರ, ಪಾಂಡಪ್ಪ ಲಮಾಣಿ, ಸೋಮಪ್ಪ ಲಮಾಣಿ, ಪೀಕಲೆವ್ವ ರಾಠೋಡ, ರಾಮಪ್ಪ ಲಮಾಣಿ, ಶಾಲವ್ವ ಲಮಾಣಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net