

ಧಾರವಾಡ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಚೆನ್ನವ್ವ ಚೆನ್ನಪ್ಪ ಐರಸಂಗ ಹಾಗೂ ರಾಮಚಂದ್ರ ಚಿಲಕವಾಡ ಅವರ ದತ್ತಿ ಉಪನ್ಯಾಸ, ವಿ.ಸಿ. ಐರಸಂಗ ಅವರ ಕವನಗಳ ವಾಚನ ಹಾಗೂ ಗೀತಗಾಯನ ಕಾರ್ಯಕ್ರಮವನ್ನು ನ. 12ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಆಕಾಶವಾಣಿ ಕಾರ್ಯಕ್ರಮ ಅಽಕಾರಿ ಅರುಣ ನಾಯಕ, ಉದ್ಘೋಷಕಿ ಮಾಯಾ ರಾಮನ್ ಪಾಲ್ಗೊಳ್ಳುವರು. ೧೫ಕ್ಕೂ ಹೆಚ್ಚು ಕವಿಗಳು ಐರಸಂಗ ಅವರ ಕವನ ವಾಚನ ಮಾಡುವರು ಎಂದರು.
ಜಯಂತಿ ದೊಡ್ಡಮನಿ ಹಾಗೂ ಜಿ.ಟಿ. ದೊಡ್ಡಮನಿ ಗೀತಗಾಯನ ಪ್ರಸ್ತುತಪಡಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಬಿ. ಸರೋಜಮ್ಮ, ಅಶೋಕ ಏಣಗಿ, ಡಿ.ಟಿ. ಪಾಟೀಲ ಹಾಗೂ ನೀಲಾ ಕೊಡ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ರತ್ನಾ ಐರಸಂಗ, ಶಶಿಧರ ಉಜ್ಜನಿ, ಮಹಾತೇಶ ನರೇಗಲ್ಲ, ಎಸ್.ಕೆ. ದಾನಪ್ಪಗೌಡ, ಇತರರಿದ್ದರು.