ದಟ್ಟ ಮಂಜಿನಿಂದಾಗಿ ಬೆಂಗಳೂರಿಗೆ ವಾಪಸ್ಸಾದ ವಿಮಾನ

new plane
Published on

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ದಟ್ಟವಾದ ಮಂಜು ಆವರಿಸಿದ ಕಾರಣ ವಿಮಾನವೊಂದು ಕೆಳಗೆ ಇಳಿಯದೇ, ಬೆಂಗಳೂರಿಗೆ ವಾಪಸ್ಸಾಗಿ ಮೂರುವರೆ ತಾಸಿನ ನಂತರ ಮತ್ತೆ ಹುಬ್ಬಳ್ಳಿಗೆ ಬಂದಿಳಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಬುಧವಾರ ಬೆಳಗ್ಗೆ 7.30 ಕ್ಕೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಇಂಡಿಗೋ ವಿಮಾನ, ದಟ್ಟು ಮಂಜಿನ ಕಾರಣದಿಂದಾಗಿ ರನ್​ವೇ ಸ್ಪಷ್ಟವಾಗಿ ಗೋಚರಿಸದೇ ಆಗಸದಲ್ಲಿಯೇ ಎರಡ್ಮೂರು ಸುತ್ತು ಸುತ್ತಿತ್ತು. ಆದರೂ, ರನ್ ವೇ ಗೋಚರಿಸದ ಕಾರಣ ಮರಳಿ ಬೆಂಗಳೂರಿಗೆ ವಾಪಸ್ಸಾಗಿತ್ತು.

ಬೆಂಗಳೂರು ನಿಲ್ದಾಣದಲ್ಲಿ ಸುಮಾರು ಒಂದೂವರೆ ತಾಸು ನಿಲುಗಡೆಗೊಂಡಿತ್ತು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ರನ್ ವೇ ಸ್ಪಷ್ಟವಾಗಿ ಗೋಚರಿಸುತ್ತಿರುವ ಮಾಹಿತಿ ತಿಳಿದ ನಂತರ ಬೆಳಗ್ಗೆ 10.15ಕ್ಕೆ ಹುಬ್ಬಳ್ಳಿಯತ್ತ ಮತ್ತೆ ಹಾರಾಟ ಪ್ರಾರಂಭಿಸಿತ್ತು. 11 ಗಂಟೆಗೆ ಹುಬ್ಬಳ್ಳಿ ನಿಲ್ದಾಣದಲ್ಲಿ ವಿಮಾನ ಬಂದಿಳಿಯಿತು ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರೆಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net