ವಿಮಾನ ನಿಲ್ದಾಣಕ್ಕೆ 10 ಜಾಗತಿಕ ಪ್ರಶಸ್ತಿ

airport award
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶೀಯ ಹಾಗೂ ಅಂತಾರಾಷ್ಟ್ರೀಯ ಲೌಂಜ್‌ಗಳಲ್ಲಿ ಚಾಲ್ತಿಗೆ ತಂದಿರುವ ಆಹಾರ, ಪಾನೀಯ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಜಾಗತಿಕವಾಗಿ 10 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಒಮ್ಮೆಲೆ ಇಷ್ಟು ಪ್ರಮಾಣದ ಪ್ರಶಸ್ತಿ ಪಡೆದ ವಿಮಾನ ನಿಲ್ದಾಣಗಳ ಪೈಕಿ ಒಂದಾಗಿದೆ.

ಇತ್ತೀಚೆಗೆ ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ ವಿಮಾನ ನಿಲ್ದಾಣ ಆಹಾರ, ಪಾನೀಯ ಹಾಗೂ ಆತಿಥ್ಯ ಕ್ಷೇತ್ರದ ಸಮ್ಮೇಳನ 2025 ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಈ ಪ್ರಶಸ್ತಿ ಸ್ವೀಕರಿಸಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದ ಲೌಂಜ್ ಮತ್ತು ರೆಸ್ಟೋರೆಂಟ್‌ಗಳು ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕವಾಗಿಯೂಶ್ರೇಷ್ಠತೆಯನ್ನು ಸಾಬೀತುಪಡಿಸುತ್ತಿವೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ವಾಣಿಜ್ಯ ಅಧಿಕಾರಿ ಕೆನ್ನೆತ್ ಗುಲ್ಡ್‌ಬ್ಜೆರ್ಗ್ ತಿಳಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ 080 ಲೌಂಜ್ ಒಟ್ಟು 7 ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಟರ್ಮಿನಲ್ 2 ರಲ್ಲಿರುವ 080 ಲೌಂಜ್ ಪ್ರಾದೇಶಿಕ ಮತ್ತು ಜಾಗತಿಕ ವಿಭಾಗದಲ್ಲಿ ವರ್ಷದ ಅತ್ಯುತ್ತಮ ಲೌಂಜ್ ಪ್ರಶಸ್ತಿ ಜತೆಗೆ, ಪ್ರಾದೇಶಿಕ ಮತ್ತು ಜಾಗತಿಕ ವಿಭಾಗದಲ್ಲಿ ಏರ್‌ಪೋರ್ಟ್‌ ಎ್ ಬಿ ಆರ್ ಆ್ ದಿ ಇಯರ್ - ಸೆನ್ಸ್ ಆ್ ಪ್ಲೇಸ್ ಪ್ರಶಸ್ತಿ ಪಡೆದುಕೊಂಡಿದೆ. ಟಿ2 ನಲ್ಲಿರುವ 080 ಪ್ರಾದೇಶಿಕ ಲೌಂಜ್‌ನೊಳಗಿನ ಸಿಗ್ನೇಚರ್ ರೆಸ್ಟೋರೆಂಟ್‌ಕಿಲಾ, ಗಮನಾರ್ಹ ವಾಸ್ತುಶಿಲ್ಪ ಮತ್ತು ವಾತಾವರಣಕ್ಕಾಗಿ ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ರೆಸ್ಟೋರೆಂಟ್ ವಿನ್ಯಾಸ ಪ್ರಶಸ್ತಿ ಪಡೆದುಕೊಂಡಿದೆ.

ಪ್ರಶಸ್ತಿಗಳ ವಿವರ:

ಟರ್ಮಿನಲ್ 1 ಹಾಗೂ 2 ನಲ್ಲಿರುವ 080 ದೇಶೀಯ ಹಾಗೂ ಅಂತಾರಾಷ್ಟ್ರೀಯ ಲೌಂಜ್ಗಳಿಗೆ 10 ಜಾಗತಿಕ ಪ್ರಶಸ್ತಿ ಲಭಿಸಿದೆ. ವರ್ಷದ ಅತ್ಯುತ್ತಮ ಲೌಂಜ್ ಪ್ರಾದೇಶಿಕ, ವರ್ಷದ ಅತ್ಯುತ್ತಮ ಲೌಂಜ್, ವಿಮಾನ ನಿಲ್ದಾಣದ ಎ್ಬಿ ವರ್ಷದ ಕೊಡುಗೆ - ಸೆನ್ಸ್ ಆ್ ಪ್ಲೇಸ್ ಪ್ರಾದೇಶಿಕ, ವಿಮಾನ ನಿಲ್ದಾಣದ ಎ್ಬಿ ವರ್ಷದ ಕೊಡುಗೆ, ಅತ್ಯುತ್ತಮ ರೆಸ್ಟೋರೆಂಟ್‌ವಿನ್ಯಾಸ ಪ್ರಾದೇಶಿಕ, ವರ್ಷದ ವಿಮಾನ ನಿಲ್ದಾಣದ ಲೌಂಜ್ ಉದ್ಘಾಟನೆ ಪ್ರಾದೇಶಿಕ, ವರ್ಷದ ವಿಮಾನ ನಿಲ್ದಾಣದ ಲೌಂಜ್ ಉದ್ಘಾಟನೆ ಜಾಗತಿಕ, ವರ್ಷದ ವಿಮಾನ ನಿಲ್ದಾಣದ ಲೌಂಜ್ ಉದ್ಘಾಟನೆ ಜಾಗತಿಕ, ವರ್ಷದ ವಿಮಾನ ನಿಲ್ದಾಣದ ಕ್ಯಾಶುಯಲ್ ಡೈನಿಂಗ್ ರೆಸ್ಟೋರೆಂಟ್‌ಗಳು ಪ್ರಶಸ್ತಿಗೆ ಭಾಜನವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net