ಮಿನಿ ವಿಮಾನ ನಿಲ್ದಾಣಕ್ಕೆ ಮರುಜೀವ

airport
Published on

ಮಡಿಕೇರಿ

ಪ್ರವಾಸೋದ್ಯಮದ ಮೂಲಕ ಗುರುತಿಸಿಕೊಂಡಿರುವ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣದ ಕನಸು ಮತ್ತೆ ಚಿಗುರೊಡೆದಿದೆ. ಉಡಾನ್ ಯೋಜನೆ ಅಡಿಯಲ್ಲಿ ತಲೆ ಎತ್ತಲಿರುವ ರಾಜ್ಯದ 5 ಮಿನಿ ಏರ್‌ಪೋರ್ಟ್ಗಳ ಪೈಕಿ ಕೊಡಗಿನ ಕುಶಾಲನಗರದ ಹೆಸರೂ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆಶಾಭಾವನೆ ಮೂಡಿಸಿದೆ. ರೈಲ್ವೆ ಸಂಪರ್ಕ ಗಗನ ಕುಸುಮವಾಗಿಯೇ ಉಳಿಯುವ ಲಕ್ಷಣಗಳು ಕಂಡುಬರುತ್ತಿರುವ ಸಂದರ್ಭದಲ್ಲಿ 'ಏರ್‌ಸ್ಟಿçಪ್' ಪ್ರಸ್ತಾಪ ಒಂದಿಷ್ಟು ನಿರೀಕ್ಷೆಗಳಿಗೆ ಕಾರಣವಾಗಿದೆ.

ಕೊಡಗಿಗೆ ಒಂದು ಮಿನಿ ವಿಮಾನ ನಿಲ್ದಾಣ ಬೇಕು ಎನ್ನುವುದು ಸ್ಥಳೀಯರ ಹಳೆಯ ಬೇಡಿಕೆ. ಜಿಲ್ಲೆಯಲ್ಲಿ ಕನಿಷ್ಠ ಮಿನಿ ವಿಮಾನ ನಿಲ್ದಾಣ ಇದ್ದರೆ ಜಗತ್ತಿನ ಜತೆ ಸಂಪರ್ಕ ಸುಲಭವಾಗಲಿದೆ. ಪ್ರವಾಸೋದ್ಯಮ ಮತ್ತು ವಾಣಿಜ್ಯ ವ್ಯವಹಾರಗಳ ಬೆಳವಣಿಗೆ ದÊಷ್ಟಿಯಿಂದಲೂ ಪೂರಕವಾಗಲಿದೆ ಎನ್ನುವ ಸದುz್ದೆÃಶವೂ ಇದರ ಹಿಂದಿದೆ. ಮಡಿಕೇರಿ ಶಾಸಕರೂ ಆಗಿದ್ದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಾ ಬಂದಿದ್ದರೂ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ.

ಬೆಟ್ಟ-ಗುಡ್ಡಗಳಿಂದ ಕೂಡಿರುವ ಮಲೆನಾಡು ಜಿಲ್ಲೆ ಕೊಡಗಿನಲ್ಲಿ ವಿಮಾನ ನಿಲ್ದಾಣಕ್ಕೆ ಅಗತ್ಯವಾದ ವಿಶಾಲವಾಗಿರುವ ಸಮತಟ್ಟು ಜಾಗ ಒಂದೇ ಕಡೆಯಲ್ಲಿ ಸಿಗುವುದು ಕಷ್ಟ. ಆದರೂ ಜಿಲ್ಲಾ ಕೇಂದ್ರ ಮಡಿಕೇರಿಯ ಸುತ್ತಮುತ್ತ, ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಚಿಕ್ಕ ಅಳುವಾರ, ಬ್ಯಾಡಗೊಟ್ಟ, ಬೈದಗುಟ್ಟ, ಮಾದಾಪುರ, ಕೂಡಿಗೆ ಮತ್ತಿತರ ಜಾಗದಲ್ಲಿ ಸ್ಥಳ ಹುಡುಕಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಸÀರ್ಕಾರಕ್ಕೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೊಡಗು ಗುಡ್ಡಗಾಡು ಪ್ರದೇಶ ಎನ್ನುವ ಕಾರಣ ನೀಡಿಯೇ ತಜ್ಞರು ಯೋಜನೆಗೆ ನಕಾರ ಸೂಚಿಸಿದ್ದರು.

2012ರಲ್ಲಿ ಅಪ್ಪಚ್ಚು ರಂಜನ್ ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾಗಿದ್ದ ಸಂದರ್ಭ ಕೊಡಗಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಪ್ರಸ್ತಾವನೆಗೆ ಮತ್ತೆ ಜೀವ ಕೊಡುವ ಪ್ರಯತ್ನ ನಡೆಸಲಾಯಿತು. ಕುಶಾಲನಗರ ತಾಲೂಕು ಕೂಡಿಗೆ ಕÊಷಿ ಫಾರಂ ಆವರಣದಲ್ಲಿನ ವಿಶಾಲವಾದ ಜಾಗದ ಬಳಕೆ ಬಗ್ಗೆ ಸಲಹೆ ನೀಡಿದ್ದಲ್ಲದೆ, ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಜತೆಗೆ ವಿಮಾನ ಯಾನ ತರಬೇತಿ ಕೇಂದ್ರ ತೆರೆಯುವ ಚಿಂತನೆಯೂ ನಡೆದಿತ್ತು.

ಮಿನಿ ವಿಮಾನ ನಿಲ್ದಾಣದ ಕನಸು ಜೀವಂತ ಆಗಿರುವಂತೆಯೇ ರಾಜ್ಯ ಸರ್ಕಾರ 2022ರ ಬಜೆಟ್‌ನಲ್ಲಿ ರಾಜ್ಯದ ಮೂರು ಕಡೆ ಹೆಲಿಪೋರ್ಟ್ ನಿರ್ಮಾಣಕ್ಕೆ ಘೋಷಿಸಿದ್ದ ಸ್ಥಳಗಳ ಪೈಕಿ ಕೊಡಗು ಕೂಡ ಸೇರಿತ್ತು. ಈ ಹಿನ್ನೆಲೆಯಲ್ಲಿ ಜಾಗದ ಪರಿಶೀಲನೆಗೆ ಆಗಮಿಸಿದ್ದ ಕರ್ನಾಟಕ ರಾಜ್ಯ ಮೂಲ ಸೌಲಭ್ಯ ಮತ್ತು ಕೈಗಾರಿಕಾ ಅಭಿವÊದ್ಧಿ ನಿಗಮದ ಅಂದಿನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ರವಿ ಸೀ ಪ್ಲೇನ್ ಯೋಜನೆ ಜಾರಿ ಸಾಧ್ಯತೆಯ ಪ್ರಸ್ತಾಪ ಮಾಡಿದ್ದರು. ಹೆಲಿಪೋರ್ಟ್ಗೆ ಮಡಿಕೇರಿಯಲ್ಲಿ ಸೂಕ್ತ ಸ್ಥಳಾವಕಾಶದ ಕೊರತೆ ಕಂಡುಬAದಿದ್ದರಿAದ ಮಿನಿ ವಿಮಾನ ನಿಲ್ದಾಣಕ್ಕೆ ನಿಗದಿಯಾಗಿದ್ದ ಕೂಡಿಗೆಯ ಜಾಗವನ್ನೇ ಹೆಲಿಪೋರ್ಟ್ಗೆ ಬಳಸುವ ಸುಳಿವು ನೀಡಿದ್ದಲ್ಲದೆ, ಹಾರಂಗಿ ಹಿನ್ನೀರಿನಲ್ಲಿ ಸೀ ಪ್ಲೇನ್ ಕನಸನ್ನು ಬಿತ್ತಿ ತೆರಳಿದ್ದರು.

2019ರ ನವೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲಿ ಕರ್ನಾಟಕದಲ್ಲಿ ಉz್ದÉÃಶಿತ ವಿಮಾನ ನಿಲ್ದಾಣಗಳ ಪೈಕಿ ಕೊಡಗಿನ ಮಿನಿ ವಿಮಾನ ನಿಲ್ದಾಣಕ್ಕೆ ಸ್ಥಾನ ಸಿಕ್ಕಿತ್ತು. ಉಡಾನ್ ಯೋಜನೆ ಅಡಿಯಲ್ಲಿ ಒಂದು ಕಿ.ಮೀ. ಉದ್ದದ ರನ್ ವೇ ಇರುವ ಮಿನಿ ವಿಮಾನ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ವಿವಿಧ ಇಲಾಖೆಗಳ ತಜ್ಞರ ತಂಡವೂ ಆಗಮಿಸಿ ಸ್ಥಳ ಪರಿಶೀಲನೆಯನ್ನೂ ನಡೆಸಿತ್ತು. ಆದರೆ ಯೋಜನೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿರಲಿಲ್ಲ.

ಇದೀಗ ಮತ್ತೆ ಉಡಾನ್ ಯೋಜನೆ ಅಡಿಯಲ್ಲಿ ಕೊಡಗಿನಲ್ಲಿ ಮಿನಿ ವಿಮಾನ ನಿಲ್ದಾಣದ ಪ್ರಸ್ತಾಪ ಇರುವ ಬಗ್ಗೆ ಕೇಂದ್ರ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೊಲ್ ಮಾಹಿತಿ ಕೊಟ್ಟಿದ್ದಾರೆ. 'ಕರ್ನಾಟಕದಲ್ಲಿ ಹೆಚ್ಚು ವಿಮಾನ ನಿಲ್ದಾಣಗಳು ಹಾಗೂ ವಿಮಾನಗಳ ಹಾರಾಟ ಸಂಬAಧ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಪ್ರಸ್ತಾವ ಸಲ್ಲಿಸಿದೆಯೇ? ಕಾರ್ಯಾಚರಣೆಯಲ್ಲಿರುವ ಹಾಗೂ ಪ್ರಸ್ತಾಪಿತ ಏರ್‌ಸ್ಟ್ರಿಪ್ ವಿಚಾರವಾಗಿ ಕೇಂದ್ರ ಸರ್ಕಾರ ಏನಾದರೂ ಸಮೀಕ್ಷೆ ಕೈಗೊಂಡಿದೆಯೇ ?,' ಎನ್ನುವುದು ಸೇರಿದಂತೆ ಸಂಸದ ಬಸವರಾಜ ಬೊಮ್ಮಾಯಿ 4 ವಿಚಾರಗಳ ಬಗ್ಗೆ ಸಂಸತ್‌ನಲ್ಲಿ ಪ್ರಶ್ನೆ ಮಾಡಿದ್ದರು.

ಬಸವರಾಜ ಬೊಮ್ಮಾಯಿ ಅವರ ಈ ಚುಕ್ಕಿ ಗುರುತು ಇಲ್ಲದ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೊಲ್, 'ಉಡಾನ್‌ನಡಿ ಏರ್‌ಸ್ಟಿçಪ್ ನಿರ್ಮಾಣಕ್ಕೆ ಕರ್ನಾಟಕದ ಬಳ್ಳಾರಿ, ಕೋಲಾರ, ಕುಶಾಲನಗರ, ರಾಯಚೂರು ಹಾಗೂ ಹಾಸನವನ್ನು ತಾತ್ಕಾಲಿಕವಾಗಿ ಗುರುತಿಸಲಾಗಿದೆ. ಬೀದರ್, ಮೈಸೂರು, ವಿದ್ಯಾನಗರ, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ, ಶಿವಮೊಗ್ಗದಲ್ಲಿ ಈಗಾಗಲೇ ವಿಮಾನಗಳ ಹಾರಾಟ ಪ್ರಕ್ರಿಯೆ ಮುಂದುವರಿದಿದೆ. ವಿಜಯಪುರ ಹಾಗೂ ಕಾರವಾರದಲ್ಲಿಇನ್ನಷ್ಟೇ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಆರಂಭವಾಗಬೇಕಿದೆ,' ಎಂದು ಮಾಹಿತಿ ನೀಡಿದ್ದಾರೆ.

ಕೊಡಗಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಕನಸು ಕಾಣುತ್ತಿದ್ದವರಿಗೆ ಕೇಂದ್ರ ಸರ್ಕಾರದ ಈ ಉತ್ತರದಿಂದ ಮತ್ತೆ ನಿರೀಕ್ಷೆಗಳು ಹುಟ್ಟುಕೊಂಡಿದೆ. ಆದಷ್ಟು ಶೀಘ್ರ ಕಾಮಗಾರಿ ಶುರುವಾಗುವು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಕೊಡಗಿನಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣದ ಉದ್ದೇಶಕ್ಕಾಗಿ ಈಗಾಗಲೇ ಕುಶಾಲನಗರ ತಾಲೂಕು ಕೂಡಿಗೆಯಲ್ಲಿ ಜಾಗ ಗುರುತಿಸಲಾಗಿದೆ. ಸÀರ್ಕಾರ ಮತ್ತು ಕಂದಾಯ ಇಲಾಖೆ ಹೆಸರಿನಲ್ಲಿರುವ 16.81 ಎಕರೆ, ಕೂಡಿಗೆ ಕÊಷಿ ಫಾರಂಗೆ ಸೇರಿರುವ 32.44 ಎಕರೆ ಹಾಗೂ ಸೈನಿಕ ಶಾಲೆಗೆ ಸೇರಿರುವ 0.40 ಎಕರೆ ಸೇರಿ ಒಟ್ಟು 49.65 ಎಕರೆ ಜಾಗವನ್ನು ಇದೇ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ.

ಕೊಡಗಿಗೆ ಯಾಕೆ ಏರ್‌ಪೋರ್ಟ್ ಬೇಕು?

- ಸಾಕಾನೆ ಶಿಬಿರ ದುಬಾರೆ, ಬೈಲಕುಪ್ಪೆ ಗೋಲ್ಡನ್ ಟೆಂಪಲ್, ಪ್ರವಾಸಿ ತಾಣ ಮಾಂದಲಪಟ್ಟಿ ಹಾಗೂ ಇಲ್ಲಿಯ ಜಲಪಾತಗಳಿಗೆ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ಕೊಡುತ್ತಾರೆ.

- ಸಿನಿಮಾ ಚಿತ್ರೀಕರಣಕ್ಕೂ ಹೇಳಿ ಮಾಡಿಸಿದಂತಿರುವ ಸ್ಥಳಗಳು ಇಲ್ಲಿದೆ.

- ಕಾವೇರಿ ಉಗಮ ಸ್ಥಾನ ತಲಕಾವೇರಿ, ಪುಣ್ಯ ಕ್ಷೇತ್ರ ಭಾಗಮಂಡಲ, ಪಾಡಿ ಇಗ್ಗುತ್ತಪ್ಪ ದೇವಾಲಯಕ್ಕೆ ದೇಶ ವಿದೇಶಗಳಲ್ಲೂ ಭಕ್ತರಿದ್ದಾರೆ.

- ಕಾಫಿ, ಕರಿಮೆಣಸು, ಏಲಕ್ಕಿ ಸೇರಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಿಗೆ ವಿದೇಶಿ ಮಾರುಕಟ್ಟೆ ಸÊಷ್ಟಿಯಾಗುತ್ತದೆ

- ಯೋಧರ ನಾಡು ಕೊಡಗಿನ ಸಾವಿರಾರು ಮಂದಿ ಸೇನೆಯಲ್ಲಿದ್ದಾರೆ. ಇವರಿಗೂ ತವರಿಗೆ ಬಂದು ಹೋಗಲು ಅನುಕೂಲ.

- ಸÀರ್ಕಾರಿ ಮೆಡಿಕಲ್ ಕಾಲೇಜು, ಎಂಜಿನಿಯರಿAಗ್ ಕಾಲೇಜು ಇದೆ. ಪ್ರತ್ಯೇಕ ಕೊಡಗು ವಿಶ್ವವಿದ್ಯಾಲಯವೂ ಕಾರ್ಯ ನಿರ್ವಹಿಸುತ್ತಿದೆ.

ಕೊಡಗಿಗೆ ವಾಯುಯಾನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕುಶಾಲನಗರದಲ್ಲಿ ಮಿನಿ ವಿಮಾನ ನಿಲ್ದಾಣ ಅಗತ್ಯವಾಗಿ ಬೇಕಾಗಿದೆ. ಈ ಸಂಬAಧದ ಪ್ರಸ್ತಾಪ ನೆನೆಗುದಿಗೆ ಬಿದ್ದಿದೆ ಎಂದೇ ನಂಬಿರುವ ಸಂದರ್ಭದಲ್ಲಿ ಉಡಾನ್ ಯೋಜನೆ ಅಡಿಯಲ್ಲಿ ಕುಶಾಲನಗರದಲ್ಲಿ ಮಿನಿ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸಿರುವುದು ಸ್ವಾಗತಾರ್ಹ. ಸಂಸತ್‌ನಲ್ಲೇ ಈ ಮಾಹಿತಿ ಹೊರಬಿದ್ದಿರುವುದರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬಹುದು. ಕೊಡಗಿಗೆ ಮಿನಿ ವಿಮಾನ ನಿಲ್ದಾಣ ಬಂದರೆ ಪ್ರವಾಸೋದ್ಯಮ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಿಗೂ ಅನುಕೂಲ ಆಗಲಿದೆ.

ರತೀಶ್, ಪ್ರವಾಸೋದ್ಯಮಿ, ದುಬಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net