ಕೊಡಗಿಗೆ ವಿಮಾನ ನಿಲ್ದಾಣ ತರಲು ಪ್ರಯತ್ನ

airport
Published on

ಮಡಿಕೇರಿ

ಜಗತ್ತಿನ ಪ್ರವಾಸಿ ಭೂಪಟದಲ್ಲಿ ಗುರುತಿಸಿಕೊಂಡಿರುವ ಕೊಡಗಿಗೆ ಮಿನಿ ವಿಮಾನ ನಿಲ್ದಾಣ ಬೇಕು ಎನ್ನುವುದು ಬಹಳ ಹಳೆಯ ಬೇಡಿಕೆ. ಈ ಸಂಬAಧ ಜಾಗವೂ ಗುರುತಿಸಲಾಗಿದೆ. ಆದರೆ ಅದಕ್ಕಿಂತ ಮುಂದೆ ಯಾವುದೇ ಬೆಳವಣಿಗೆ ಆಗಿಲ್ಲ. ಕೊಡಗಿಗೆ ಮಿನಿ ವಿಮಾನ ನಿಲ್ದಾಣ ತರಲು ಕಳೆದ 2 ದಶಕಗಳಿಂದ ಸ್ಥಳೀಯ ಜನಪ್ರತಿನಿಧಿಗಳು ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. ಕನಿಷ್ಠ ಒಂದು ಮಿನಿ ವಿಮಾನ ನಿಲ್ದಾಣ ಇದ್ದರೆ ಜಗತ್ತಿನ ಜೊತೆ ಸಂಪರ್ಕ ಸುಲಭವಾಗಲಿದೆ. ಪ್ರವಾಸೋದ್ಯಮ ಮತ್ತು ವಾಣಿಜ್ಯ ವ್ಯವಹಾರಗಳ ಬೆಳವಣಿಗೆ ದÊಷ್ಟಿಯಿಂದಲೂ ಪೂರಕವಾಗಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

2019ರ ನವೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲೂ ರಾಜ್ಯದಲ್ಲಿ ಉz್ದೆÃಶಿತ ನಿಲ್ದಾಣಗಳ ಪೈಕಿ ಕೊಡಗಿನ ಮಿನಿ ವಿಮಾನ ನಿಲ್ದಾಣಕ್ಕೆ ಸ್ಥಾನ ಸಿಕ್ಕಿತ್ತು. ಉಡಾನ್ ಯೋಜನೆ ಅಡಿಯಲ್ಲಿ ಒಂದು ಕಿ.ಮೀ. ಉದ್ದದ ರನ್ ವೇ ಇರುವ ಮಿನಿ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ವಿವಿಧ ಇಲಾಖೆಗಳ ತಜ್ಞರ ತಂಡವೂ ಆಗಮಿಸಿ ಸ್ಥಳ ಪರಿಶೀಲನೆಯನ್ನೂ ನಡೆಸಿತ್ತಾದರೂ ಯೋಜನೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ.

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಏರ್‌ಸ್ಟಿçಪ್ ನಿರ್ಮಾಣದ ಪ್ರಸ್ತಾಪವೂ ಆಗಿತ್ತು. ಆದರೆ ಆ ಯೋಜನೆಯೂ ನೆನೆಗುದಿಗೆ ಬಿದ್ದಿದೆ. ಕೊಡಗಿನಲ್ಲಿ ಮಿನಿ ವಿಮಾನ ನಿಲ್ದಾಣಕ್ಕೆ ಈಗಾಗಲೇ ಕುಶಾಲನಗರ ತಾಲೂಕು ಕೂಡಿಗೆಯಲ್ಲಿ ಜಾಗ ಗುರುತಿಸಲಾಗಿದೆ. ಸರ್ಕಾರ ಮತ್ತು ಕಂದಾಯ ಇಲಾಖೆ ಹೆಸರಿನಲ್ಲಿರುವ 16.81 ಎಕರೆ, ಕೂಡಿಗೆ ಕÊಷಿ ಫಾರಂಗೆ ಸೇರಿರುವ 32.44 ಎಕರೆ ಹಾಗೂ ಸೈನಿಕ ಶಾಲೆಗೆ ಸೇರಿರುವ 0.40 ಎಕರೆ ಸೇರಿ ಒಟ್ಟು 49.65 ಎಕರೆ ಜಾಗ ಸೂಕ್ತ ಎಂದು ಗುರುತಿಸಲಾಗಿದೆ. ನಂತರ ಯಾವುದೇ ಬೆಳವಣಿಗೆ ಈ ವಿಷಯದಲ್ಲಿ ಆಗಿಲ್ಲ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಕೊಡಗು ಪ್ರವಾಸೋದ್ಯಮ ಜಿಲ್ಲೆಯಾಗಿದೆ. ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಂಡಿದೆ. ಆದರೆ ವೀಕೆಂಡ್‌ಗಳಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆಯಿದೆ. ಪ್ರವಾಸಿಗರಿಗೆ ಕಿರಿಕಿರಿಯಾಗುತ್ತಿದೆ. ಮಳೆಗಾಲದಲ್ಲಂತೂ ರಸ್ತೆ ಮಾರ್ಗ ಸಂಚಾರಕ್ಕೆ ಯೊಗ್ಯವಾಗಿಲ್ಲ. ಮಿನಿ ವಿಮಾನ ನಿಲ್ದಾಣ, ಹೆಲಿಪ್ಯಾಡ್ ಸ್ಥಾಪನೆಯಾಗಬೇಕು. ಇಲ್ಲಿನ ಜನಪ್ರತಿನಿಧಿಗಳು ಯೋಜನೆಗಳನ್ನು ರೂಪಿಸಬೇಕು.

ಆಶಾ ಯೋಗೇಂದ್ರ, ಹೋಂಸ್ಟೇ ಮಾಲೀಕರು, ಸೋಮವಾರಪೇಟೆ

ಸರ್ಕಾರ ಈ ಹಿಂದೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಏರ್‌ಸ್ಟಿçಪ್ ಯೋಜನೆಗೆ ಈಗಿನ ಸರ್ಕಾರ ಹಣ ಬಿಡುಗಡೆ ಮಾಡಬೇಕಾಗಿದೆ. ಮಿನಿ ವಿಮಾನ ನಿಲ್ದಾಣ ಮತ್ತು ಹೆಲಿಪ್ಯಾಡ್ ಸ್ಥಾಪನೆಯ ಕೊಡಗಿನ ಜನರ ಬಹುದಿನಗಳ ಕನಸು ನನಸಾಗಬೇಕಿದೆ. ಹೆಲಿಕ್ಟಾಪರ್, ಮಿನಿ ವಿಮಾನಗಳ ಹಾರಾಟ ಪ್ರಾರಂಭವಾದರೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ.

-ಕೆ.ಪಿ. ದಿನೇಶ್, ನಿರ್ದೇಶಕ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸೋಮವಾರಪೇಟೆ

ಸರ್ಕಾರ ತನ್ನ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಕೊಡಗಿನ ಯೋಜನೆಗಳಾವುವೂ ಕಾರ್ಯಗತವಾಗುವ ನಂಬಿಕೆ ಇಲ್ಲ. ಏರ್‌ಸ್ಟಿçಪ್ ಆಗಲಿ, ಮಿನಿ ವಿಮಾನ ನಿಲ್ದಾಣ, ಹೆಲಿಪ್ಯಾಡ್ ಯಾವ ಯೋಜನೆಗಳಿಗೂ ಜಾಗ ಗುರುತು ಮಾಡಿದ ಸುದ್ದಿ ಬಂದಿಲ್ಲ. ಇನ್ನು ಪ್ರವಾಸೋದ್ಯಮ ಅಭಿವೃದ್ಧಿ ಬಹಳ ಹಿಂದಿನಿAದಲೂ ಹೇಳಿಕೆಯಾಗಿಯೇ ಉಳಿದಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿ ಹಣ ಬಿಡುಗಡೆ ಮಾಡದಿದ್ದರೆ ಕಾಮಗಾರಿಗಳು ನಡೆಯುವುದು ಹೇಗೆ?

ಎಸ್. ಎಂ. ಉಮಾಶಂಕರ್, ಕೃಷಿಕ, ಸಿಡಿಗಳಲೆ, ಶನಿವಾರಸಂತೆ

ಪ್ರವಾಸೋದ್ಯಮದ ಅಭಿವೃದ್ಧಿಗೆ ಈ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುವುದು ಅನಿವಾರ್ಯ. ಆದರೆ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಇನ್ನೇನು ಮಳೆಗಾಲ ಮುಗಿಯುತ್ತಾ ಬರುತ್ತಿದೆ. ಆದಷ್ಟು ಬೇಗ ಯೋಜನೆಗಳಿಗೆ ಚಾಲನೆ ಸಿಕ್ಕಿದರೆ ಒಳ್ಳೆಯದು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಬಹುದು.

ವಿಜಯ್, ಗೋಣಿಕೊಪ್ಪ ನಿವಾಸಿ

ಪ್ರವಾಸೋದ್ಯಮಕ್ಕೆ ಆಧುನಿಕ ಸ್ಪರ್ಶ ನೀಡುವ ಮೊದಲು ಇಲ್ಲಿನ ಮೂಲಭೂತ ಸಮಸ್ಯೆಗಳತ್ತ ಗಮನ ಹರಿಸಬೇಕು. ಈಗಲೂ ಹಲವಾರು ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದೆ. ಅದನ್ನು ಮೊದಲು ಸರಿಪಡಿಸಬೇಕು. ಆಮೇಲೆ ಈ ರೀತಿಯ ಆಧುನಿಕ ಯೋಜನೆಗಳು ಜಾರಿಯಾಗಲಿ.

ಅರ್ಪಿತ ಕೆ.ಆರ್., ಗೃಹಿಣಿ, ಗೋಣಿಕೊಪ್ಪ

ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ವ್ಯವಹಾರಗಳ ಬೆಳವಣಿಗೆಗೆ ರೈಲ್ವೆ ಹಾಗೂ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಆಗಬೇಕು ಎನ್ನುವುದು ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯ ಜನತೆಯ ಬೇಡಿಕೆ ಆಗಿದೆ. ಆದರೆ, ಯೋಜನೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಈಗಲಾದರೂ ಸರ್ಕಾರ ಈ ನಿಟ್ಟಿನಲ್ಲಿ ಮುನ್ನಡಿ ಇಡಲಿ.

ಶಿಯಾಬ್, ಸಿದ್ದಾಪುರ ನಿವಾಸಿ

ಬಜೆಟ್‌ನಲ್ಲಿ ಸರ್ಕಾರ ಘೋಷಿಸಿದ ಯೋಜನೆಗಳನ್ನು ನೋಡಿದರೆ ಕೊಡಗು ಪ್ರವಾಸೋದ್ಯಮದಲ್ಲಿ ದೊಡ್ಡಮಟ್ಟಿಗೆ ಬೆಳೆಸುವ ಯೋಜನೆಗಳಾಗಿದೆ. ಆದರೆ ಇದುವರೆಗೂ ಯಾವುದೇ ಯೋಜನೆ ಕಾರ್ಯಾರಂಭವಾಗದೆ ಇರುವುದು ಮಾತ್ರ ವಿಪರ್ಯಾಸ. ಈ ಹೊಸ ಯೋಜನೆಗಳು ಪೂರ್ಣಗೊಂಡರೆ ಕೊಡಗಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಪ್ರವಾಸೋದ್ಯಮದ ಮೂಲಕ ಕೊಡಗು ಇನ್ನಷ್ಟು ಅಭಿವೃದ್ಧಿ ಕಾಣಲಿದೆ.

ಲತೀಶ್ ಟಿ. ಬಿ., ಉದ್ಯಮಿ, ವಿರಾಜಪೇಟೆ.

ಯಾವುದೇ ಸರ್ಕಾರಗಳು ಬಂದರೂ ಕೊಡಗಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಘೋಷಣೆ ಮಾತ್ರ ಇರುತ್ತದೆ. ಆದರೆ ಕಾಮಗಾರಿಗಳು ಆರಂಭಗೊಳ್ಳದೆ ಪ್ರವಾಸೋದ್ಯಮ ಹಿನ್ನಡೆ ಅನುಭವಿಸುವಂತಾಗಿದೆ. ಈಗಿನ ಜನಪ್ರತಿನಿಧಿಗಳು, ಅಧಿಕಾರಿಗಳು ಉತ್ಸಾಹ ತೋರಿಸಿ ಬರಬೇಕಾದ ಸೌಲಭ್ಯಗಳು ಕ್ಷಿಪ್ರಗತಿಯಲ್ಲಿ ಬಂದರೆ ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಲಿದೆ.

ಇ.ಬಿ. ಜೋಸೆಫ್, ಅಧ್ಯಕ್ಷ, 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ

ಭಾರತದ ಸ್ವಿಡ್ಜರ್‌ಲ್ಯಾಂಡ್ ಎಂದು ಕರೆಸಿಕೊಳ್ಳುತ್ತಿರುವ ನಮ್ಮ ಕೊಡಗು ಭೌಗೋಳಿಕವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸರ್ಕಾರ ಅಂತಾರಾಷ್ಟಿçÃಯ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಬಹುದು. ಕೊಡಗನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದ ಗಮನವನ್ನು ಸೆಳೆಯಬಹುದು. ಆದರೆ ಎಲ್ಲವೂ ನೆನೆಗುದಿಗೆ ಬಿದ್ದಿರುವುದು ದುರಾದೃಷ್ಟಕರ.

ಪಟ್ಟಡ ರೀನಾ ದೀಪಕ್, ಅವಂದೂರು ಗ್ರಾಮ

ಕುಶಾಲನಗರದ ಸಮೀಪ ಉದ್ದೇಶಿತ ಏರ್‌ಸ್ಟಿçಪ್ ನಿರ್ಮಾಣಕ್ಕೆ ಸಂಬAಧಿಸಿದAತೆ ಸರ್ಕಾರದ ಜತೆ ಈಗಾಗಲೇ ಚರ್ಚಿಸಲಾಗಿದೆ. ದೊಡ್ಡ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ನೇತೃತ್ವದಲ್ಲಿ ಇತ್ತೀಚೆಗೆ ನಡೆಸಿದ್ದ ಸಭೆಯಲ್ಲಿ ಭಾಗವಹಿಸಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಈ ವೇಳೆ ಸಂಬAಧಪಟ್ಟ ಇಲಾಖೆ ಅಧಿಕಾರಿಗಳೂ ಇದ್ದರು. ಸಕರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net