ಏರ್‌ಲೈನ್ಸ್ ಉದ್ಯೋಗ ಆಮಿಷ 56,500 ರೂ. ವಂಚನೆ

Fruad
Published on

ಮಂಗಳೂರು: ಇಂಡಿಗೋ ಏರ್‌ಲೈನ್ಸ್‌ನಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಹೇಳಿ 56,500 ರೂ. ಪಡೆದು ವಂಚಿಸಿರುವ ಘಟನೆ ನಡೆದಿದೆ.


ದೂರುದಾರರು ಜೂ.13ರಂದು ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕೆಲಸಕ್ಕೆಂದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅವರಿಗೆ ಅದೇ ದಿನ ಅಪರಿಚಿತ ವ್ಯಕ್ತಿ 9598520567ನಿಂದ ಕರೆ ಮಾಡಿ 1,500 ರೂ.ಗಳನ್ನು ಪಾವತಿಸಿ ಹೆಸರು ನೋಂದಾಯಿಸುವಂತೆ ತಿಳಿಸಿದ್ದ. ಅದರಂತೆ ದೂರುದಾರರು ಗೂಗಲ್‌ಪೇ ಮೂಲಕ ಹಣ ಪಾವತಿಸಿದ್ದಾರೆ. ಮರುದಿನ ಇಂಟರ್‌ವ್ಯೆಗೆ ಎಂದು 6,000 ರೂ. ಪಡೆದುಕೊಂಡ. ಅನಂತರ ತರಬೇತಿ, ಕೊರಿಯರ್ ಚಾರ್ಜ್, ಇನ್ಸೂರೆನ್ಸ್ ಇತ್ಯಾದಿ ಕಾರಣಗಳನ್ನು ಹೇಳಿ ಒಟ್ಟು 56,600 ರೂ.ಗಳನ್ನು ಪಡೆದುಕೊಂಡು ಮೋಸ ಮಾಡಿದ್ದಾನೆ ಎಂದು ಕಂಕನಾಡಿ ನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net