

ತರೀಕೆರೆ: ಬೆಟ್ಟದಹಳ್ಳಿಯಲ್ಲಿ ಬೆಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಐರಾವತ ಬಸ್‌ನ ಇಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ
ಬೆಂಕಿ ತಗುಲಿ ಸುಟ್ಟುಹೋಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅವಘಡ ತಪ್ಪಿದೆ.
ಮಂಗಳವಾರ ಮಧ್ಯಾಹ್ನ 1 ಗಂಟೆ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಬಸ್‌ಗೆ ಬೆಟ್ಟದಹಳ್ಳಿಯಲ್ಲಿ ಬೆಂಕಿ ತಗುಲಿದೆ. ಬೆಂಕಿ ಹೊತ್ತಿಕೊಂಡಿದ್ದನ್ನು ತಕ್ಷಣವೇ ಗಮನಿಸಿದ ಚಾಲಕ ಬಸ್‌ಅನ್ನು ನಿಯಂತ್ರಣಕ್ಕೆ ತಂದು, ರಸ್ತೆ ಪಕ್ಕ ನಿಲ್ಲಿಸಿ ಪ್ರಯಾಣಿಕರನ್ನೆಲ್ಲ ಸುರಕ್ಷಿತವಾಗಿ ಕೆಳಗಿಳಿಸುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದರು.
ಮಾಹಿತಿ ತಿಳಿದು ಅಗ್ನಿ ಶಾಮಕ ವಾಹನ ಘಟನಾ ಸ್ಥಳಕ್ಕೆ ಬಂತಾದರೂ, ಅಷ್ಟೊತ್ತಿಗಾಗಲೇ ಬಸ್‌ನ ಬಹುತೇಕ ಭಾಗ ಸುಟ್ಟು ಕರಕಲಾಗಿತ್ತು.