ವಾಯುಮಾಲಿನ್ಯ ಪ್ರತಿವರ್ಷ 70 ಲಕ್ಷ ಜನರ ಸಾವು

27 NMG 01
ನಾಗಮಂಗಲ ತಾಲೂಕಿನ ಅಳಿಸಂದ್ರ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಕೆ.ಟಿ.ಹನುಮಂತು ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಿದರು. ಕೆ.ಎಸ್ ಚಂದ್ರಶೇಖರ್, ರಂಗನಾಥ , ಶ್ಯಾಮಲಾ, ಸಂತೆಕಸಲಗೆರೆ ಬಸವರಾಜು ಇತರರಿದ್ದರು.
Published on

ನಾಗಮಂಗಲ : ಪ್ರಸ್ತುತ ಪ್ರಂಚದಲ್ಲಿ ಪ್ರತಿವರ್ಷ 70 ಲಕ್ಷ ಜನ ಕಲುಷಿತ ಗಾಳಿ ಸೇವಿಸಿ ಮೃತಪಡುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಅಲೆಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಅಧ್ಯಕ್ಷ ಕೆ.ಟಿ.ಹನುಮಂತು ಕಳವಳ ವ್ಯಕ್ತಪಡಿಸಿದರು.

ನಾಗಮಂಗಲ ತಾಲೂಕಿನ ಅಳಿಸಂದ್ರ ಗ್ರಾಮದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್ ನ್ಯಾಶನಲ್, ಪರಿಸರ ಅಲಯನ್ಸ್ ಸಂಸ್ಥೆ ಮಂಡ್ಯ ಹಾಗೂ ಸಂಗೀತ ನೃತ್ಯ ಕಲಾನಿಕೇತನ ಟ್ರಸ್ಟ್ ಕರ್ನಾಟಕ ಇವರ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳ ವಿತರಣೆ ಹಾಗೂ ಗಿಡ ನೆಡುವ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು.

ಭಾರತ ದೇಶದಲ್ಲಿ 20 ಲಕ್ಷ ಮಂದಿ ಕಲುಷಿತಗಾಳಿ ಸೇವಿಸಿ ದುರ್ಮರಣ ಹೊಂದುತ್ತಿದ್ದಾರೆ, ಪ್ರತಿನಿತ್ಯ 5479 ಜನ ವಾಯುಮಾಲನ್ಯ ಸಂಬಂಧ ಸಮಸ್ಯೆಗಳಿಂದ ಬಳಲುವಂತಾಗಿದೆ, ಪ್ರತಿ ಹತ್ತು ಜನರಲ್ಲಿ 9 ಜನ ಮಾಲಿನ್ಯಗಾಳಿಯನ್ನೇ ಸೇವಿಸುತ್ತಿದ್ದಾರೆ. ಇಡೀ ಜಗತ್ತಿಗೆ ವಾಯು ಮಾಲಿನ್ಯ ಪೆಡಂಭೂತದಂತೆ ಕಾಡುತ್ತಿದೆ, ಜೀವಸಂಕುಲದ ಮೇಲೆ ವ್ಯೆತಿರಿಕ್ತ ಪರಿಣಾಮ ಬೀರುತ್ತಿದೆ, ತಾಯಿಯ ಗರ್ಭದಲ್ಲಿರುವ ಮಗುವಿಗೂ ಕಲುಷಿತ ಗಾಳಿಯ ಛಾಯೆ ಆವರಿಸುತ್ತಿದೆ. ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರಗಳು ಅನೇಕ ಕ್ರಮಕೈಗೊಂಡಿವೆ, ಜನಸಾಮಾನ್ಯರು ಪೆಟ್ರೋಲ್, ಡಿಸೇಲ್ ಮಿತವಾಗಿ ಬಳಸಬೇಕು, ಮರಗಿಡ ಹೆಚ್ಚು ನೆಡಬೇಕು, ಮರ ಕಡಿಮೆಯಾದಷ್ಟು ಮಾಲಿನ್ಯ ಹೆಚ್ಚಾಗುತ್ತದೆ. ಬೃಹತ್ ನಗರಗಳು ಮಾಲಿನ್ಯದಿಂದ ತತ್ತರಿಸುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ಅಲೆಯನ್ಸ್ ಸಂಸ್ಥೆಯ 2ನೇ ಜಿಲ್ಲಾ ರಾಜ್ಯಪಾಲ ಕೆ.ಎಸ್ ಚಂದ್ರಶೇಖರ್, ಪ್ರೌಢಶಾಲಾ ಮುಖ್ಯ ಶಿಕ್ಷಕ ರಂಗನಾಥ ಎಚ್.ಎನ್.ಪ್ರಾಥಮಿಕ ಶಾಲಾ ಶಿಕ್ಷಕಿ ಶ್ಯಾಮಲಾ, ಪರಿಸರ ಅಲಯನ್ಸ್ ಸಂಸ್ಥೆ ಅದ್ಯಕ್ಷ ಸಂತೆಕಸಲಗೆರೆ ಬಸವರಾಜು, ಸಿಆರ್‌ಪಿ ಪುರುಷೋತ್ತಮ, ಹಳೇ ವಿದ್ಯಾರ್ಥಿಗಳಾದ ರವಿಕುಮಾರ್, ಪ್ರಶಾಂತ್, ಕುಮಾರ್, ಗಾಯಕ ಹನಿಯಂಬಾಡಿ ಎನ್ ಶೇಖರ್, ಎಚ್.ಪಿ. ವೈರಮುಡಿ, ಸಂಗೀತ ನೃತ್ಯ ಕಲಾನಿಕೇತ ಟ್ರಸ್ಟ್‌ನ ಅದ್ಯಕ್ಷ ಶೋಭ ಪಿ.ಗೌಡ, ಸುನಂದರಾಜು, ಸುನಿತಾ, ಸುಮಾ, ಮಣಿಯಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net