ಅಧ್ಯಕ್ಷರಾಗಿ ಐಪನಹಳ್ಳಿ ಡಿ.ಸುರೇಶ್ ಅವಿರೋಧ ಆಯ್ಕೆ

01krp-01
Published on

ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲಂಬಾಡಿ ಕಾವಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಐಪನಹಳ್ಳಿ ಡಿ.ಸುರೇಶ್ ಅವರು ಅವಿರೋಧವಾಗಿ ಆಯ್ಕೆಯಾದರು.


ಹಿಂದಿನ ಅಧ್ಯಕ್ಷರಾಗಿದ್ದ ಎ.ಎಂ.ಪುಟ್ಟಶೆಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ತೆರವಾದ ಅಧ್ಯಕ್ಷ ಸ್ಥಾನಕ್ಕೆ ಐಪನಹಳ್ಳಿ ಡಿ.ಸುರೇಶ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಅಧಿಕಾರಿ ಜಗದೀಶ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಐಪನಹಳ್ಳಿ ಡಿ.ಸುರೇಶ್ ಅವರನ್ನು ಸಂಘದ ಉಪಾಧ್ಯಕ್ಷ ನಾಗೇಗೌಡ, ನಿರ್ದೇಶಕರಾದ ಎ.ಎಂ.ಸಂಜೀವಪ್ಪ, ಎ.ಟಿ.ಕರಿಶೆಟ್ಟಿ, ಜಿ.ಎಸ್.ಕುಮಾರ್, ರಾಜೇಗೌಡ, ಆಶಾ ದೇವರಾಜು, ರಾಜಾನಾಯಕ್, ಮಹಾದೇವಪ್ಪ, ಶಾಂತಮ್ಮ ಕೃಷ್ಣೇಗೌಡ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಜೆ.ಆರ್.ಜಲೇಂದ್ರ, ಸಂಘದ ಕಾರ್ಯದರ್ಶಿ ಪಿ.ಎಂ.ಕಾಳೇಗೌಡ, ಮಾರಾಟ ಗುಮಾಸ್ತರಾದ ಎ.ಜೆ.ಧರ್ಮ, ನಾಗಮಣಿ ದಿವಾಕರ್, ರಾಣಿ ರಾಮೇಗೌಡ ಹಾಗೂ ಸಂಘದ ವ್ಯಾಪ್ತಿಯ ಹಲವು ಮುಖಂಡರು ಅಭಿನಂದಿಸಿದರು.

01.ಕೆ.ಆರ್.ಪಿ-01: ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲಂಬಾಡಿ ಕಾವಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಐಪನಹಳ್ಳಿ ಡಿ.ಸುರೇಶ್ ಅವರನ್ನು ಸಂಘದ ನಿರ್ದೇಶಕರು ಹಾಗೂ ಮುಖಂಡರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net