

ಐನಾಪುರ: ಇಲ್ಲಿನ ಪಟ್ಟಣ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕಸ್ತೂರಿ ಮಡಿವಾಳ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷೆ ಸರೋಜಿನಿ ಗಾಣಿಗೇರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಕಸ್ತೂರಿ ಮಡಿವಾಳ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ತಹಸೀಲ್ದಾರ್ ರಾಜೇಶ ಬುರ್ಲಿ ಸೋಮವಾರ ಘೋಷಿಸಿದರು.
ಬಳಿಕ ಬೆಂಬಲಿಗರು ಅಧ್ಯಕ್ಷೆ ಕಸ್ತೂರಿ ಮಡಿವಾಳ ಅವರನ್ನು ಸನ್ಮಾನಿಸಿದರು.
ಪಪಂ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರೆ, ಮಹಾಂತೇಶ ಬಾದವಾಡಗಿ, ಗ್ರಾಮಲೆಕ್ಕಾಧಿಕಾರಿ ಪ್ರಕಾಶ ಪುಠಾಣಿ ಚುನಾವಣೆ ಕಾರ್ಯನಿರ್ವಹಿಸಿದರು. ಉಪಾಧ್ಯಕ್ಷ ರತ್ನವ್ವ ಮಾದರ, ಸದಸ್ಯ ಪ್ರವೀಣ ಗಾಣಿಗೇರ, ಸರೋಜಿನಿ ಗಾಣಿಗೇರ, ಸಂಜಯ ಬಿರಡಿ, ಸಂಜಯ ಕುಚನೂರೆ, ಕುಮಾರ ಜಯಕರ, ರಾಜು ಹರಳೆ, ಧರೆಪ್ಪ ಹರಳೆ, ಲಕ್ಷ್ಮವ್ವ ಅಡಿಶೇರಿ, ಜಯಶ್ರೀ ಹರಳೆ, ದಾದಾ ಜೇಂತೆನವರ, ಸಂಜು ಕುಸನಾಳೆ, ಗುರುರಾಜ ಮಡಿವಾಳ, ಉಮಾಜಿ ನಡೋಣಿ, ಸುರೇಶ ಅಡಿಶೇರಿ, ಸುದರ್ಶನ ಜೇಂತನವರ, ಪ್ರಕಾಶ ಗಾಣಿಗೇರ ಇತರರಿದ್ದರು.