

ಐನಾಪುರ: ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಸರೋಜಿನಿ ಗಾಣಿಗೇರ, ಉಪಾಧ್ಯಕ್ಷೆಯಾಗಿ ರತ್ನವ್ವ ಮಾದರ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ಕಾಗವಾಡ ತಹಸೀಲ್ದಾರ್ ರಾಜೇಶ ಬುರ್ಲಿ ಘೋಷಿಸಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಎರಡೂ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆಯಾಯಿತು.
ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗ, ಉಪಾಧ್ಯಕ್ಷ ಸ್ಥಾನ ಪಜಾ ಮೀಸಲಾಗಿತ್ತು. ಕಾಂಗ್ರೆಸ್ ಮುಖಂಡ ಅರುಣ ಗಾಣಿಗೇರ ಮಾತನಾಡಿದರು.
ಪಪಂ ಸದಸ್ಯರಾದ ಸಂಜಯ ಕುಚನೂರೆ, ಪ್ರವೀಣ ಗಾಣಿಗೇರ, ಸಂಜು ಭಿರಡಿ, ಕುಮಾರ ಜಯಕರ, ಸುರೇಶ ಅಡಿಶೇರಿ, ರಾಜು ಹರಳೆ, ಧರೆಪ್ಪ ಹರಳೆ, ಕಸ್ತೂರಿ ಮಡಿವಾಳ, ಸುರೇಶ ಗಾಣಿಗೇರ, ಗುರು ಮಡಿವಾಳ, ದಾದಾ ಜಂತೆನ್ನವರ, ಡಾ. ಅರವಿಂದ ಕಾರ್ಚಿ, ಪ್ರಕಾಶ ಗಾಣಿಗೇರ, ನವೀನ ಗಾಣಿಗೇರ, ಅಮಿತ ಗಾಣಿಗೇರ, ಸದಾಶಿವ ಗಾಣಿಗೇರ, ರಾಜು ಮದಣೆ ಇತರರಿದ್ದರು.