ಅರೆಭಾಷಿಕರ ಐನ್ ಮನೆ ಐಸಿರಿ ಕಾರ್ಯಕ್ರಮ

Sul_Arebashe
Published on

ಸುಳ್ಯ: ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಅರೆಭಾಷಿಕರ ಐನ್ ಮನೆ ಐಸಿರಿ ಕಾರ್ಯಕ್ರಮ ಆಲೆಟ್ಟಿ ಗ್ರಾಮದ ಕುಡೆಕಲ್ಲು ಐನ್ ಮನೆ ವಠಾರದಲ್ಲಿ ನಡೆಯಿತು.

ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು. ಕುಡೆಕಲ್ಲು ಐನ್ ಮನೆಯ ವಂಶವೃಕ್ಷ ಚಾರ್ಟ್ ಅನ್ನು ಸದಾನಂದ ಮಾವಜಿ ಅನಾವರಣಗೊಳಿಸಿದರು.

ಕುಡೆಕಲ್ಲು ಕುಟುಂಬದ ಹಿರಿಯರಾದ ಸಾವಿತ್ರಿ ರವೀಂದ್ರನಾಥ್ ಕುಡೆಕಲ್ಲು ಉದ್ಘಾಟಿಸಿದರು. ಹಿಂಗಾರ ಪತ್ರಿಕೆಯನ್ನು ಆಲೆಟ್ಟಿ ಸಹಕಾರ ಸಂಘ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ನೆರವೇರಿಸಿದರು.

ದ.ಕ. ಜೇನು ವ್ಯವಸಾಯ ಸಹಕಾರ ಸಂಘ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಗೀತಾ ಕೋಲ್ಚಾರ್, ಕುಡೆಕಲ್ಲು ಐನ್ ಮನೆಯ ಮಾಜಿ ಆಡಳ್ತೆದಾರ ವಾಸುದೇವ ಗೌಡ ಕುಡೆಕಲ್ಲು, ಸುಳ್ಯ ಗೌಡರ ಯುವ ಸೇವಾ ಸಂಘ ಉಪಾಧ್ಯಕ್ಷ ಯತಿರಾಜ ಭೂತಕಲ್ಲು, ಆಲೆಟ್ಟಿ ಗ್ರಾಮ ಗೌಡ ಸಮಿತಿ ಅಧ್ಯಕ್ಷ ಸತೀಶ್ ಕೊಯಿಂಗಾಜೆ, ಕುಡೆಕಲ್ಲು ಐನ್ ಮನೆ ಆಡಳ್ತೆದಾರ ಬಿಪಿನ್ ಕುಡೆಕಲ್ಲು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಚ್ಚುತ ಮಾಸ್ತರ್ ನಾರ್ಕೋಡು ಭಾಗವಹಿಸಿದ್ದರು.

ಅಕಾಡೆಮಿ ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್ ಸ್ವಾಗತಿಸಿದರು. ಕಾರ್ಯಕ್ರಮ ಸದಸ್ಯ ಸಂಯೋಜಕರಾದ ತೇಜ ಕುಮಾರ್ ಕುಡೆಕಲ್ಲು ಪ್ರಾಸ್ತಾವಿಕ ಮಾತನಾಡಿದರು. ಸದಸ್ಯ ಚಂದ್ರಶೇಖರ ಪೇರಾಲು ಹಿಂಗಾರ ಪತ್ರಿಕೆ ಕುರಿತು ಮಾತನಾಡಿದರು. ಸದಸ್ಯ ಸಂಯೋಜಕ ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸದಸ್ಯೆ ಲತಾ ಪ್ರಸಾದ್ ಕುದ್ಪಾಜೆ ವಂದಿಸಿದರು. ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಪಿ.ಎಸ್.ಕಾರ್ಯಪ್ಪ, ಸೂದನ ಎಸ್.ಈರಪ್ಪ, ಲೋಕೇಶ್ ಊರುಬೈಲು, ಸಂದೀಪ್ ಪೂಳಕಂಡ, ಗೋಪಾಲ ಪೆರಾಜೆ ಉಪಸ್ಥಿತರಿದ್ದರು. ಬಳಿಕ ಅರೆಭಾಷೆ ಐನ್ ಮನೆಗಳ ಕುರಿತು ಉಪನ್ಯಾಸ ನಡೆಯಿತು. ಅರೆಭಾಷೆ ಪರಂಪರೆ ಸಂಶೋಧಕ ಅನಂತರಾಜ ಗೌಡ ಅಧ್ಯಕ್ಷತೆ ವಹಿಸಿದ್ದರು. ಅರೆಭಾಷೆ ಐನ್‌ಮನೆಗಳ ಆಡಳಿತ ವಿಷಯದ ಬಗ್ಗೆ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಮಿಲನ ಭರತ್, ಕುಡೆಕಲ್ಲು ಐನ್‌ಮನೆಗಳ ಕುರಿತು ಮನೋಜ್ ಕುಡೆಕಲ್ಲು ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net