ವಿವೇಕರ ಆದರ್ಶ ದಾರಿದೀಪವಾಗಲಿ

AML VIVEKANANDA 27
Published on

ಐಮಂಗಲ: ಸ್ವಾಮಿ ವಿವೇಕಾನಂದರ ವಿಚಾರ ಅಳವಡಿಸಿಕೊಂಡಲ್ಲಿ ಎಲ್ಲ ಕಾರ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಚಿತ್ರದುರ್ಗ ಶ್ರೀಶಾರದ ರಾಮಕೃಷ್ಣ ಆಶ್ರಮದ ಬ್ರಹ್ಮನಿಷ್ಠಾನಂದ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಸೋಮವಾರ ಮಹಿಳಾ ಸ್ವ-ಸಹಾಯ ಸಂಘದಿಂದ ಆಯೋಜಿಸಿದ್ದ ವಿವೇಕಾನಂದ ಜಯಂತಿ ಉದ್ಘಾಟಿಸಿ ಮಾತನಾಡಿ, ವಿವೇಕಾನಂದರು ಚಿಕ್ಕ ವಯಸ್ಸಿನಲ್ಲಿಯೇ ಹಠವಾದಿ, ಜ್ಞಾನಿಯಾಗಿ, ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಭಾರತದ ತತ್ವ, ಜ್ಞಾನ, ಸಂಸ್ಕೃತಿ ಹಿರಿಮೆಯನ್ನು ಜಗತ್ತಿಗೆ ಸಾರಿದರು ಎಂದರು.

ಶ್ರದ್ಧೆ, ಏಕಾಗ್ರತೆ ಯಾರಲ್ಲಿದೆಯೋ ಅವರು ಯಾವುದೇ ಕೆಲಸಗಳನ್ನು ಉತ್ತಮವಾಗಿ ಮಾಡಬಲ್ಲರು ಎಂಬುದಕ್ಕೆ ವಿವೇಕಾನಂದರು ಮಾದರಿ ಎಂದು ಹೇಳಿದರು.

ಮುಖಂಡ ಆರ್.ಬಿ.ಬುಡೇನ್‌ಸಾಬ್, ಸಿಂಡಿಕೇಟ್ ಬ್ಯಾಂಕ್‌ನ ವ್ಯವಸ್ಥಾಪಕ ಶಿವಸುಭ್ರಮಣ್ಯಂ, ಅಂಗನವಾಡಿ ಮೇಲ್ವಿಚಾರಕಿ ಶಾಂತಕುಮಾರಿ, ವೇದಾ ಪಾಟೀಲ್, ಸಿ.ರಾಧಾಕೃಷ್ಣ, ಜಾಕೀರ್ ಹುಸೇನ್, ಶಕೀಲಾ ಬಾನು, ಗಿರಿಜಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net