ಸೊಂಡೆಕೆರೆಯಲ್ಲಿ ದೋಣಿ ಪೂಜೆ ಪವಾಡ

AML DONI 09
Published on

ಐಮಂಗಲ: ಹೋಬಳಿಯ ಸೊಂಡೆಕೆರೆ ಗ್ರಾಮದಲ್ಲಿ ಭಾನುವಾರ ಶ್ರೀ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ ಅಂಗವಾಗಿ ಗೊರವಪ್ಪ ಹಾಗೂ ಯಲ್ಲಮ್ಮ ಜ್ಯೋಗತೀಯರಿಂದ ದೋಣಿ ಪೂಜೆ ಪವಾಡ ನಡೆಯಿತು.

ಗ್ರಾಮದ ಮೈಲಾರ ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭರತ ಹುಣ್ಣಿಮೆಯ ಮೊದಲ ದಿನ ಹಾಗೂ ಯುಗಾದಿಯ ಚಂದ್ರ ದರ್ಶನದ ಬೆಳಗ್ಗೆ ದೋಣಿ ಸೇವೆ ಮಾಡುವ ಸಂಪ್ರದಾಯ ಹಿಂದಿನಿಂದಲ್ಲೂ ನಡೆಸಿಕೊಂಡು ಬರಲಾಗಿದೆ. ಶ್ರೀಕ್ಷೇತ್ರ ಮೈಲಾರ ಲಿಂಗೇಶ್ವರನ ಸನ್ನಿಧಿಗೆ ಪಾದಯಾತ್ರೆ ಹೋಗುವ ಮೊದಲು ದೋಣಿ ಸೇವೆ ನಡೆಸಲಾಗುತ್ತದೆ ಎಂದು ಗ್ರಾಮದ ಎಸ್.ಟಿ. ಮಂಜುನಾಥ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net