ಕರೊನಾ ತಡೆ ಜಾಗೃತಿ, ಮಾಸ್ಕ್ ವಿತರಣೆ

AML KIT 30
Published on

ಐಮಂಗಲ: ಹೋಬಳಿಯ ಹರ್ತಿಕೋಟೆ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಗುರುವಾರ ಮನೆ ಮನೆಗೆ ತೆರಳಿ ನಾಗರಿಕರಿಗೆ ಮಾಸ್ಕ್ ವಿತರಿಸಿ ಕರೊನಾ ಕುರಿತು ಜಾಗೃತಿ ಮೂಡಿಸಲಾಯಿತು.

ಗ್ರಾಪಂ ಅಧ್ಯಕ್ಷ ರಂಗಮಹೇಶ್ ಮಾತನಾಡಿ, ಕರೊನಾ ನಿಯಂತ್ರಣಕ್ಕಾಗಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳ ಚರಂಡಿ ಸ್ವಚ್ಛತೆ ಜತೆಗೆ ಕ್ರಿಮಿನಾಶಕ ಸಿಂಪಡಣೆ, ಮಾಸ್ಕ್ ವಿತರಣೆ ಹಾಗೂ ಅಂಗನವಾಡಿ-ಆಶಾ, ಆರೋಗ್ಯ ಇಲಾಖೆ ಕಾರ್ಯಕರ್ತೆಯರಿಂದ ಜಾಗೃತಿ ಸಹ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಪಿಡಿಒ ಬೇಗಂ, ಸದಸ್ಯರಾದ ಚಿದಾನಂದಮೂರ್ತಿ, ಪುಟ್ಟಲಿಂಗಮ್ಮ, ಕಸಾಪ ತಾಲೂಕು ಅಧ್ಯಕ್ಷ ಮಹಾಸ್ವಾಮಿ, ವಸಂತಪ್ಪ, ಬಡಗಿ ತಿಪ್ಪಣ್ಣ, ನಿಜಲಿಂಗಪ್ಪ ಗಣಾಚಾರ್, ಮುತ್ತುರಾಜ್, ಭದ್ರಿ, ಮಣಿಕಂಠ, ಅಂಗನವಾಡಿ-ಆಶಾ ಕಾರ್ಯರ್ತೆಯರಾದ ಅಶ್ವಿನಿ, ಮಾಲಾ, ಸಣ್ಣಮ್ಮ ಮತ್ತಿತರರಿದ್ದರು.

ಸೂರಗೊಂಡನಹಳ್ಳಿ: ಗ್ರಾಮ ಪಂಚಾಯಿತಿ ವತಿಯಿಂದ ಮನೆ ಮನೆಗೂ ವಿತರಿಸಲು ಮಾಸ್ಕ್ ಮತ್ತು ಸ್ಯಾನಿಟೈಸರ್ ಇತರೆ ವಸ್ತುಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಹಸ್ತಾಂತರಿಸಲಾಯಿತು. ಅಧ್ಯಕ್ಷೆ ಚಂದ್ರಮ್ಮ,, ಪಿಡಿಒ ಸೌಮ್ಯಾ, ತಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ, ಸದಸ್ಯರಾದ ಸುರೇಶ್, ಭೂತೇಶ್, ಜಗದೀಶ್, ಪ್ರಕಾಶ್, ಭೀಮಣ್ಣ, ಶ್ರೀನಿವಾಸ್, ಹನುಮಂಗಪ್ಪ, ನೀಲಕಂಠಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net