ಸಾವಯವ ಗೊಬ್ಬರ ಬಳಕೆ ಅವಶ್ಯ

AML SAMVADA 15
Published on

ಐಮಂಗಲ: ಸಾವಯವ ಗೊಬ್ಬರ ಬಳಸಿ ಬಿತ್ತನೆ ಮಾಡಿದರು ಉತ್ತಮ ಇಳುವರಿ ಪಡೆಯಲು ಸಾಧ್ಯ ಜಿಪಂ ಸದಸ್ಯೆ ಶಶಿಕಲಾ ಸುರೇಶ್ ಬಾಬು ಹೇಳಿದರು.

ವಿಶ್ವ ಧಾನ್ಯಗಳ ದಿನಾಚರಣೆ ಅಂಗವಾಗಿ ಐಮಂಗಲ ರೈತಸಂಪರ್ಕ ಕೇಂದ್ರದಿಂದ ತಾಳವಟ್ಟಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ರೈತರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಸಗೊಬ್ಬರ ಬಳಕೆ ಪ್ರಮಾಣ ಕಡಿಮೆ ಮಾಡಬೇಕು. ಮಣ್ಣಿನ ಆರೋಗ್ಯ ಹೆಚ್ಚಲು ಕೊಟ್ಟಿಗೆ ಗೊಬ್ಬರ ಸಹಕಾರಿ. ದ್ವಿದಳ ಧಾನ್ಯ, ಸಿರಿ ಧಾನ್ಯ ಬೆಳೆದು ಲಾಭ ಗಳಿಸಬಹುದು ಎಂದರು.

ಸಹಾಯಕ ಕೃಷಿ ನಿರ್ದೇಶಕಿ ಉಲ್ಫತ್ ಜೈಬಾ ಮಾತನಾಡಿ, ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಗೊಬ್ಬರ, ಕೃಷಿ ಯಂತ್ರೋಪಕರಣ ನೀಡಲಾಗುತ್ತಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕೃಷಿ ಅಧಿಕಾರಿ ಬಿ.ಎಂ.ಆಶಾರಾಣಿ, ರಾಧಮ್ಮ, ಸಿಬ್ಬಂದಿ ಸೋಮಶೇಖರ್, ಪ್ರಸಾದ್, ಗ್ರಾಮಸ್ಥರಾದ ಸಿದ್ದಪ್ಪರೆಡ್ಡಿ, ಅರವಿಂದ್, ಸಂದೀಪ್, ಪ್ರಗತಿಪರ ರೈತ ಹೇಮದಳ ಸಿದ್ದಪ್ಪ, ಕಂದಿಕೆರೆ ಸುರೇಶ್‌ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net