ಮಹಿಳಾ ಸಂಘದ ಷೇರುದಾರರ ಹೆಚ್ಚಿಸುವ ಗುರಿ

kanaka
ಕಡೂರು ಕನಕಶ್ರೀ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷೆ ಸುಜಾತಾ ಕೃಷ್ಣಮೂರ್ತಿ, ಉಪಾಧ್ಯಕ್ಷೆ ನಾಗಮ್ಮ, ನಿರ್ದೇಶಕರಾದ ಸವಿತಾ, ಸುಮತಿ, ಪುಷ್ಪಲತಾ ಇತರರಿದ್ದರು.
Published on

ಕಡೂರು: ಸಹಕಾರ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಜತೆಗೆ 3 ಸಾವಿರ ಮಹಿಳಾ ಷೇರುದಾರರನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಕನಕಶ್ರೀ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಜಾತಾ ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಕನಕಶ್ರೀ ಮಹಿಳಾ ಸಹಕಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, 11 ವರ್ಷಗಳ ಹಿಂದೆ ಮಹಿಳೆಯರ ಸಬಲೀಕರಣಕ್ಕಾಗಿ ಪ್ರಾರಂಭವಾದ ಕನಕಶ್ರೀ ಮಹಿಳಾ ಸಂಘದಲ್ಲಿ ಸಾವಿರಕ್ಕೂ ಹೆಚ್ಚು ಷೇರುದಾರರಿದ್ದಾರೆ. ಪ್ರಸಕ್ತ ವರ್ಷ 7.50 ಕೋಟಿ ರೂ. ವಹಿವಾಟು ನಡೆಸಲಾಗಿದೆ ಎಂದರು.
14 ಕೋಟಿ ರೂ. ಸಾಲ ನೀಡಲಾಗಿದ್ದು, ಕರೊನಾ ನಂತರ ವಸೂಲಾತಿಯಲ್ಲಿ ಪ್ರಗತಿ ಸಾಧಿಸಲಾಗಿದೆ. ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಹೆಚ್ಚು ಸಾಲ ಮರುಪಾವತಿಯಾಗುತ್ತಿದೆ. ಕಚೇರಿಯ ಲೆಕ್ಕಪತ್ರಗಳು ಗಣಕೀಕೃತಗೊಳಿಸಲಾಗಿದೆ. ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸಹಕಾರ ಸಂಘಕ್ಕೆ ನಿವೇಶನ ಪಡೆದು ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು. ಸರ್ಕಾರದ ಪ್ರತಿ ಆದೇಶ ಪಾಲನೆ ಮಾಡಲಾಗುತ್ತಿದೆ. ಆಭರಣದ ಮೇಲೆ ಸಾಲ ನೀಡಲಾಗುತ್ತಿದೆ. ಸ್ತ್ರೀಶಕ್ತಿ ಸಂಘಗಳನ್ನು ನಮ್ಮ ಸಹಕಾರ ಸಂಘದಲ್ಲಿ ನೋಂದಣಿ ಮಾಡಲಾಗುವುದು. ಮುಂದಿನ ಸಾಲಿನಲ್ಲಿ ಲಾಭಾಂಶ ನೀಡಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷೆ ನಾಗಮ್ಮ ನಂಜುಂಡಪ್ಪ, ನಿರ್ದೇಶಕರಾದ ಸವಿತಾ ಸತ್ಯನಾರಾಯಣ್, ಶಿವಮ್ಮ ಲೋಕೇಶ್, ಸುಮತಿಕುಮಾರ್‌ಒಡೆಯರ್, ಕೆ.ಕೆ.ಪುಷ್ಪಲತಾ ಸೋಮೇಶ್, ಆಶಾ ನಲ್ಲೂರಿ ಮಂಜುನಾಥ್, ಪುಷ್ಪಲತಾ ಮಂಜುನಾಥ್, ಆಶಾ ಗೋಪಿ, ಸುಪ್ರಿಯಾ ಮೋಹನ್, ರೇಣುಕಮ್ಮ ಶ್ರೀನಿವಾಸ್, ಇಂದ್ರಮ್ಮ ರಾಮಪ್ಪ, ಪ್ರೇಮಾ ನಾಗರಾಜ್, ಕಾರ್ಯದರ್ಶಿ ನಿರ್ಮಲಾ ಚಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net