ಯೂರಿಯಾ ಪೂರೈಕೆಗೆ ಆಗ್ರಹಿಸಿ ಎಐಕೆಕೆಎಂಎಸ್ ಪ್ರತಿಭಟನೆ

4 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರೈತರಿಗೆ ಅಗತ್ಯವಿರುವಷ್ಟು ಯೂರಿಯಾ ಗೊಬ್ಬರ ವಿತರಿಸಬೇಕು. ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟಬೇಕು. ಯೂರಿಯಾ ಜತೆ ಇತರ ಉಪ ಉತ್ಪನ್ನಗಳನ್ನು ಖರೀದಿಸುವಂತೆ ಒತ್ತಡ ಹಾಕುವವರ ವಿರುದ್ಧ ಕೃಷಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿ0ದ ನಗರದ ಜಿಲ್ಲಾಽಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ ಮಾತನಾಡಿ, ಸರಿಯಾದ ಸಮಯಕ್ಕೆ ಅಗತ್ಯವಿದ್ದಷ್ಟು ಯೂರಿಯಾ ಗೊಬ್ಬರ ಸರಬರಾಜು ಮಾಡಬೇಕಿರುವುದು ಸರ್ಕಾರದ ಕರ್ತವ್ಯ. ದುರಂತವೆ0ದರೆ ರೈತರು ಯೂರಿಯಾ ಗೊಬ್ಬರ ಸಿಗದೇ ಬೆಳೆ ಕುಂಠಿತವಾಗುತ್ತಿದೆ. ಚಳಿ, ಮಳೆಯಲ್ಲಿ ಹಗಲು ರಾತ್ರಿ ರೈತರು ಗೊಬ್ಬರಕ್ಕಾಗಿ ಸರದಿ ನಿಂತಿರುವುದು ನೋವಿನ ಸಂಗತಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಪ ಪ್ರತ್ಯಾರೋಪ ಮಾಡುತ್ತಿವೆ ಎಂದರು.

ಜಿಲ್ಲಾ ಕಾರ್ಯದರ್ಶಿ ಶರಣು ಗೋನವರ ಮಾತನಾಡಿ, ವರ್ಷಕ್ಕೆ ಅಗತ್ಯ ಗೊಬ್ಬರ, ಬೀಜ ದಾಸ್ತಾನು ಮಾಡಿ ಸಕಾಲಕ್ಕೆ ಪೂರೈಸಬೇಕು ಎಂದರು.

ಜಿಲ್ಲಾ ಸಮಿತಿಯ ಸದಸ್ಯರಾದ ಮಾರುತಿ ಪೂಜಾರ, ಶಿವಾಜಿ ಮನಗುಂಡಿ, ರಸೂಲ್ ನದಾಫ್, ಮಂಜುನಾಥ ಕಲ್ಲಾಪೂರ, ಹನುಮಮ್ಮ, ಸಿದ್ದವ್ವ , ಲಕ್ಷ್ಮವ್ವ, ಗಿರೀಶ ಪೂಜಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net