ಐಕನಹಳ್ಳಿ ಡೇರಿ ಅಧ್ಯಕ್ಷ ಡಿ.ದೇವೇಗೌಡ

10kkr1(2-24
ಕಿಕ್ಕೇರಿ ಹೋಬಳಿಯ ಐಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ದೇವೇಗೌಡ, ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆಯಾದರು. ಐಕನಹಳ್ಳಿ ಕೃಷ್ಣೇಗೌಡ, ಐ.ಡಿ.ಉದಯಶಂಕರ್, ರಾಮೇಗೌಡ, ರಾಮಕೃಷ್ಣ ಇತರರು ಇದ್ದರು.
Published on

ಕಿಕ್ಕೇರಿ: ಹೋಬಳಿಯ ಐಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ದೇವೇಗೌಡ, ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಿ.ದೇವೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಭರತ್‌ಕುಮಾರ್ ಅವಿರೋಧ ಆಯ್ಕೆ ಘೋಷಿಸಿದರು.

ನೂತನ ಅಧ್ಯಕ್ಷ ಡಿ.ದೇವೇಗೌಡ ಮಾತನಾಡಿ, ಹೈನುಗಾರಿಕೆ ನಂಬಿದ ರೈತರಿಗೆ ಸಂಘ ಆರ್ಥಿಕ ಭದ್ರತೆಗೆ ಸಹಕಾರಿಯಾಗಿದೆ. ಸಂಘದಲ್ಲಿ 12 ನಿರ್ದೇಶಕರಿದ್ದು, 560 ಷೇರುದಾರರಿದ್ದಾರೆ. ಗುಣಮಟ್ಟದ ಹಾಲು ಪೂರೈಸಲು ರೈತರು ಮುಂದಾಗಬೇಕು. ಸಂಘದ ಪ್ರಗತಿಗಾಗಿ ಗ್ರಾಮ ಮುಖಂಡರು, ನಿರ್ದೇಶಕರು, ಹಾಲು ಉತ್ಪಾದಕರು ಸಹಕಾರ ನೀಡಬೇಕು ಎಂದರು.

ಮುಖಂಡರಾದ ಐಕನಹಳ್ಳಿ ಕೃಷ್ಣೇಗೌಡ, ಐ.ಡಿ.ಉದಯಶಂಕರ್, ರಾಮೇಗೌಡ, ಡೇರಿ ನಿರ್ದೇಶಕರಾದ ರಾಮಕೃಷ್ಣ, ಶಿವರಾಂ, ನಂಜುಂಡೇಗೌಡ, ಮಂಜುನಾಥ, ಕೃಷ್ಣ, ರತ್ನಾ, ಸುಮಿತ್ರಾ, ವಸಂತಾ, ಸುಶೀಲಮ್ಮ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net